ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PFIಗೆ ಶಾಕ್ ಮೇಲೆ ಶಾಕ್; ಕೇರಳ, ತಮಿಳುನಾಡು ಸರ್ಕಾರದಿಂದಲೂ ಬ್ಯಾನ್

ತಿರುವನಂತಪುರಂ: ಕೇಂದ್ರ ಗೃಹ ಸಚಿವಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (PFI) ನಿಷೇಧಿಸಿದ ಒಂದು ದಿನದ ನಂತರ ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಸಹ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕಾನೂನುಬಾಹಿರ ಎಂದು ಘೋಷಿಸಿ ಆದೇಶ ಹೊರಡಿಸಿವೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಈ ಸಂಘಟನೆಯ ಹಲವಾರು ನಾಯಕರ ಟ್ವಿಟರ್ ಖಾತೆಯನ್ನು ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಿಂದ ತೆಗೆದುಹಾಕಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಫೇಸ್‌ಬುಕ್ ಪುಟ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸಹ ಇನ್ನು ಮುಂದೆ ಲಭ್ಯವಿರುವುದಿಲ್ಲ.

ಸಂಸ್ಥೆಯ ಖಾತೆ, @PFIofficial, ಸುಮಾರು 81,000 ಅನುಯಾಯಿಗಳನ್ನು ಹೊಂದಿತ್ತು. ಟ್ವಿಟರ್​ನಲ್ಲಿ ಪಿಎಫ್​ಐ ಅಧ್ಯಕ್ಷ OMA ಸಲಾಮ್ ಕೇವಲ 50,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿದ್ದರು.

ಸುಮಾರು 85,000 ಅನುಯಾಯಿಗಳನ್ನು ಹೊಂದಿದ್ದ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಅವರ ಹ್ಯಾಂಡಲ್‌ಗಳನ್ನು ತಡೆಹಿಡೆಯಲಾಗಿದೆ. ನಿಷೇಧಕ್ಕೂ ಮುನ್ನ ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ ನಡೆಸಿದ ದಾಳಿಗಳಲ್ಲಿ ಬಂಧಿತರಾದ 200ಕ್ಕೂ ಹೆಚ್ಚು PFI ನಾಯಕರಲ್ಲಿ ಇವರಿಬ್ಬರೂ ಸೇರಿದ್ದಾರೆ.

Edited By : Abhishek Kamoji
PublicNext

PublicNext

29/09/2022 12:52 pm

Cinque Terre

58.16 K

Cinque Terre

22

ಸಂಬಂಧಿತ ಸುದ್ದಿ