ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಎಂಡಿ ಸತೀಶ್ ಅಗ್ನಿಹೋತ್ರಿ ವಜಾ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಎಂಡಿ ‘ಸತೀಶ್ ಅಗ್ನಿಹೋತ್ರಿ ಅವರನ್ನು ವಜಾಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಹೈಸ್ಪೀಡ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ (NHSRCL) ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಮೇಲೆ ಅಧಿಕಾರ ದುರ್ಬಳಕೆ ಮತ್ತು ಯೋಜನೆ ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಿರುವ ಮತ್ತು ಬೇರೆ ಕಂಪನಿಗೆ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ಕೇಂದ್ರ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ.

ಸತೀಶ್ ಅಗ್ನಿಹೋತ್ರಿ ಬುಲೆಟ್ ಟ್ರೈನ್ ಮುಖ್ಯಸ್ಥ ಹುದ್ದೆಯನ್ನು ರದ್ದುಗೊಳಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ ಎಂದು NHSRCL ಕಂಪನಿ ಕಾರ್ಯದರ್ಶಿಗೆ ಜುಲೈ 7 ರಂದು ರೈಲ್ವೇ ಮಂಡಳಿ ಬರೆದ ಪತ್ರದಲ್ಲಿ ಸ್ಪಷ್ಟವಾಗಿದೆ.

ಪ್ರಸ್ತುತ NHSRCLನಲ್ಲಿ ನಿರ್ದೇಶಕರಾಗಿ ಅಧಿಕಾರದಲ್ಲಿರುವ ರಾಜೇಂದ್ರ ಪ್ರಸಾದ್ ಅವರಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಸದ್ಯ ಅಗ್ನಿಹೋತ್ರಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, 1988ರ ಅಡಿಯಲ್ಲಿ ತನಿಖೆ ನಡೆಸಿ ಆರು ತಿಂಗಳೊಳಗೆ ಅಥವಾ 2022ರ ಡಿಸೆಂಬರ್ 12 ರೊಳಗೆ ತನಿಖಾ ವರದಿಯನ್ನು ಲೋಕಪಾಲ್ ಕಚೇರಿಗೆ ಸಲ್ಲಿಸುವಂತೆ ಲೋಕಪಾಲ್ ನ್ಯಾಯಾಲಯವು ಸಿಬಿಐಗೆ ನಿರ್ದೇಶನ ನೀಡಿದೆ.

Edited By : Nirmala Aralikatti
PublicNext

PublicNext

08/07/2022 01:49 pm

Cinque Terre

34.67 K

Cinque Terre

1

ಸಂಬಂಧಿತ ಸುದ್ದಿ