ಹೊಸದಿಲ್ಲಿ: ಹೆಲ್ಮೆಟ್ ಧರಿಸುವುದಷ್ಟೇ ಮುಖ್ಯ ಅಲ್ಲ. ಇನ್ಮುಂದೆ ಹೆಲ್ಮೆಟ್‌ಅನ್ನು ಸಡಿಲವಾಗಿ ಧರಿಸಿದ್ದರೆ ಅದಕ್ಕೂ ಬೀಳುತ್ತೆ ದಂಡ! ಕೇಂದ್ರ ಸರ್ಕಾರ ಈ ರೀತಿಯ ಮತ್ತೊಂದು ಸಂಚಾರಿ ನಿಯಮವನ್ನು ಜಾರಿ ಮಾಡಿದೆ. ಸಡಿಲವಾಗಿ ಹೆಲ್ಮೆಟ್ ಧರಿಸಿದರೆ 2 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾಎ ಹೇಳಿದೆ.
ಹೆಲ್ಮೆಟ್ ಸರಿಯಾಗಿ ಧರಿಸದೇ ಇದ್ದರೆ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಹಾಗಾಗಿ ಜನರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದಕ್ಕೋಸ್ಕರ ಕೇಂದ್ರ ಮೋಟಾರು ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
PublicNext
22/05/2022 10:12 am