ಬೆಂಗಳೂರು: ಆಜಾನ್ ಮತ್ತು ಹನುಮಾನ್ ಚಾಲಿಸ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಈ ಹಿಂದೆಯೇ ಲೌಡ್ ಸ್ಪೀಕರ್ ಗೈಡ್ ಲೈನ್ ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿ ಲೌಡ್ ಸ್ಪೀಕರ್ ಬಳಸುವ ಬಗ್ಗೆ ಗೊಂದಲ ಇಲ್ಲ.ಎಲ್ಲರು ಆದೇಶ ಪಾಲನೆ ಮಾಡುತ್ತಿದ್ದಾರೆ.
ಈ ಕುರಿತು 2002 ರಲ್ಲಿ ಆದೇಶವಾಗಿದೆ. ರಾತ್ರಿ 10 ರಿಂದ ಮುಂಜನೆ 6 ರವರೆಗೆ ಯಾವುದೇ ಲೌಡ್ ಸ್ಪೀಕರ್ ಬಳಸಲು ಅವಕಾಶ ಇಲ್ಲ. ವಿಶೇಷ ಸಮಯದಲ್ಲಿ ಅವಕಾಶವಿದೆ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆ ಮೀಟಿಂಗ್ ಆದಮೇಲೆ ಸರ್ಕಾರ ಡಿಸೆಬಲ್ ಲೀಮಿಟ್ಸ್ ಅನುಮೋದನೆ ಮಾಡಿ ಆದೇಶ ಹೊರಡಿಸಿದೆ.
ಸದ್ಯ ಈಗಿರುವ ಲೌಡ್ ಸ್ಫೀಕರ್ ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಪಡೆಯಲು ಎಲ್ಲಾ ಮಸೀದಿ ಮಂದಿರಗಳಿಗೂ 15 ದಿನ ಗಡವು ನೀಡಲಾಗಿದೆ. 15 ದಿನದ ಒಳಗಡೆ ಅರ್ಜಿ ಅನುಮತಿ ಪಡೆಯಬೇಕು 15 ದಿನದಲ್ಲಿ ಅನುಮತಿ ಪಡೆಯದೇ ಹೊದ್ರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು.ಇನ್ನೂ ಆಜಾನ್ ವಿಚಾತವಾಗಿ ಇಲ್ಲಿ ವರೆಗೂ ಯಾವೂದೇ ಕಾನೂನು ಸುವ್ಯವಸ್ತೇ ಹದಗೆಟ್ಟಿಲ್ಲ, ನಮ್ಮರ ಎಲ್ಲರ ಮೇಲೆ ನಿಗಾ ವಹಿಸಿದ್ದಾರೆ ಎಂದರು.
PublicNext
11/05/2022 03:59 pm