ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾನೂನು ಅಧಿಕಾರವಿಲ್ಲದೆ ಭೂಮಾಲೀಕರ ಆಸ್ತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ: ಬಿಬಿಎಂಪಿಗೆ ಮುಖಭಂಗ

ಬೆಂಗಳೂರು: ಕಟ್ಟಡ ನಿರ್ಮಾಣ ಮಂಜೂರಾತಿಗೆ ಅರ್ಜಿ ಬಾಕಿ ಇರುವಾಗಲೇ ಭೂ ಮಾಲೀಕರು ತಮ್ಮ ಆಸ್ತಿಯನ್ನು ರಸ್ತೆ ಅಗಲೀಕರಣಕ್ಕೆ ಉಚಿತವಾಗಿ ನೀಡುವಂತೆ ಬಿಬಿಎಂಪಿ ಹೊರಡಿಸಿದ ಸುತ್ತೋಲೆಯು ಸಂವಿಧಾನದ 300ಎ ವಿಧಿಯನ್ನು ಉಲ್ಲಂಘಿಸುತ್ತದೆ’ ಎಂದು ಕರ್ನಾಟಕ ಉಚ್ಛ ನ್ಯಾಯಾಲಯವು ಹೇಳಿದೆ.

ರಸ್ತೆ ವಿಸ್ತರಣೆಗೆ ಜಮೀನು ನೀಡುವ ಅಗತ್ಯತೆಯ ಕುರಿತಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೊರಡಿಸಿದ ಸುತ್ತೋಲೆಗಳನ್ನು ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮೇಲಿನಂತೆ ಆದೇಶಿಸಿದೆ. ’ಕಾನೂನು ಅಧಿಕಾರವಿಲ್ಲದೆ ಭೂಮಾಲೀಕರ ಆಸ್ತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ‘ ಎಂದು ಹೇಳಿದೆ.

ಈ ಸಂಬಂಧ 2016ರ ಫೆಬ್ರವರಿ 29ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿನ ಐವರು ಆಸ್ತಿ ಮಾಲೀಕರು ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆ ಮಂಜೂರಾತಿ ಕೋರಿದ್ದರು. ಈ ಅರ್ಜಿಗೆ ಪ್ರತಿಯಾಗಿ ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆ ಮತ್ತು ಅನುಮೋದನೆಗಳನ್ನು ನ್ಯಾಯಪೀಠ ಇದೀಗ ರದ್ದುಗೊಳಿಸಿದೆ. ’ಈ ಪ್ರಕರಣದಲ್ಲಿ ವಸತಿ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲು ಬಯಸಿದ ಭೂಮಿಯ ಪ್ರಮಾಣವು ಅಭಿವೃದ್ಧಿ ಯೋಜನೆಯ ವ್ಯಾಖ್ಯಾನದಲ್ಲಿ ನಿರ್ದಿಷ್ಟಪಡಿಸಿದ ಭೂಮಿಯ ಪ್ರಮಾಣಕ್ಕಿಂತ ತುಂಬಾ ಕಡಿಮೆಯಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

Edited By : Nagaraj Tulugeri
PublicNext

PublicNext

07/02/2022 10:48 am

Cinque Terre

42.32 K

Cinque Terre

0

ಸಂಬಂಧಿತ ಸುದ್ದಿ