ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದು ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂರು ವಿವಾದಾತ್ಮಕ ಕೃಷಿ ಕಾಯ್ದೆ ರದ್ದು ಮಸೂದೆಗೆ ಅನುಮೋದನೆ ನೀಡಿದ್ದಾರೆ. ಜೊತೆಗೆ ಕಾಯ್ದೆ ರದ್ದತಿ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.

ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಮಸೂದೆ ವಾಪಸ್ ಪಡೆಯುವುದಾಗಿ ಘೋಷಿಸಿದ್ದರು. ಈ ವೇಳೆ ರೈತ ಸಂಘಟನೆಗಳು ಮಾತಿನ ಬದಲು ಮಸೂದೆ ಅಧಿಕೃತವಾಗಿ ರದ್ದು ಮಾಡಿ ಎಂದು ತಿರುಗೇಟು ನೀಡಿತ್ತು. ಬಳಿಕ ಈ ಕುರಿತು ಪ್ರಕ್ರಿಯೆ ಆರಂಭಗೊಂಡ ಬೆನ್ನಲ್ಲೇ ರೈತ ಸಂಘಟನೆಗಳು ಹೊಸ 6 ಬೇಡಿಕೆ ಮುಂದಿಟ್ಟು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿತ್ತು. ಇದೀಗ ಕೃಷಿ ಮಸೂದೆ ರದ್ದುಗೊಂಡಿದೆ. ಆದರೆ ರೈತ ಪ್ರತಿಭಟನೆ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

Edited By : Vijay Kumar
PublicNext

PublicNext

01/12/2021 10:49 pm

Cinque Terre

65.08 K

Cinque Terre

2

ಸಂಬಂಧಿತ ಸುದ್ದಿ