ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಪ್ರತಿಭಟನೆ ನಿಲ್ಲುತ್ತಿದ್ದಂತೆ ಮುನ್ನೆಲೆಗೆ ಬಂದ ಸಿಎಎ- ಕೇಂದ್ರಕ್ಕೆ ತಟ್ಟುತ್ತಾ ಮತ್ತೊಂದು ಪ್ರತಿಭಟನೆ ಬಿಸಿ

ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾಯ್ದೆ ಖಂಡಿಸಿ ನಡೆದಿರುವ ಸುದೀರ್ಘ ಪ್ರತಿಭಟನೆ ಅಂತಿಮ ಘಟ್ಟ ತಲುಪಿದೆ. ಆದರೆ ಈ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಬಿಸಿ ತಟ್ಟುವ ಲಕ್ಷಣಗಳು ಕಂಡುಬರುತ್ತಿವೆ.

ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಾತ್ಮಕ ಮೂರು ಕೃಷಿ ಕಾಯ್ದೆ ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ ಸಂಸತ್ತಿನಲ್ಲಿ ಅದು ಅಂಗೀಕಾರ ಆಗುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ. ಒಂದು ವೇಳೆ ಸಂಸತ್ತಿನಲ್ಲಿ ಕಾಯ್ದೆ ರದ್ದತಿ ಅಂಗೀಕಾರವಾದರೆ ಹಾಗೂ ಪ್ರತಿಭಟನಾಕಾರರ ಮನವಿ ಎಲ್ಲವೂ ಈಡೇರಿದರೆ, ಸದ್ಯ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್‌ ಪಡಲೇಬೇಕಾಗುತ್ತದೆ. ಇದೀಗ ಅದರ ಬೆನ್ನಲ್ಲೇ ಇಲ್ಲಿಯವರೆಗೆ ಮೌನವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಾಪಸು ಪಡೆಯಬೇಕು ಎಂದು ಪ್ರತಿಭಟನೆ ಶುರು ಮಾಡಲು ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ನಾನು ತೀರ್ಮಾನಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜಮಾಯಿತ್ ಉಲೇಮಾ-ಇ ಹಿಂದ್‌ ಅಧ್ಯಕ್ಷ ಮೌಲಾನಾ ಅರ್ಷಾದ್ ಮದನಿ ಹೇಳಿದ್ದಾರೆ.

ಸಿಎಎ ಅಷ್ಟೇ ಅಲ್ಲದೆ ಮುಸ್ಲಿಂ ಮುಖಂಡರು, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಮರುಜಾರಿ ಮಾಡಬೇಕು ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಿಂದಕ್ಕೆ ಪಡೆಯುವ ಬಗ್ಗೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಹೊತ್ತಿನಲ್ಲಿ ಪ್ರತಿಭಟನೆ ನಡೆಸಲು ಮುಸ್ಲಿಂ ಮುಖಂಡರು ಮುಂದಾಗುತ್ತಿರುವು ಕೇಂದ್ರ ಸರ್ಕಾರಕ್ಕೆ ಆಘಾತ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Edited By : Vijay Kumar
PublicNext

PublicNext

22/11/2021 12:11 pm

Cinque Terre

27.76 K

Cinque Terre

24

ಸಂಬಂಧಿತ ಸುದ್ದಿ