ಪಶ್ಚಿಮಬಂಗಾಳ: ದೀಪಾವಳಿ ಹಬ್ಬದ ಸಂಭ್ರಮ ಈಗಲೇ ಶುರು ಆಗಿದೆ. ದೀಪಗಳನ್ನ ತಯಾರಿಸೋರು ದೀಪಗಳ ತಯಾರಿಯಲ್ಲಿದ್ದಾರೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಈಗೊಂದು ನಿರ್ಧಾರ ತೆಗೆದುಕೊಂಡಿದೆ.ಅದು ದೀಪಗಳನ್ನ ಹಚ್ಚುವ ವಿಚಾರಕ್ಕೆ ಸಂಬಂಧಿಸಿದ್ದು ಅಲ್ಲವೇ ಅಲ್ಲ. ಪಟಾಕಿ ಸಿಡಿಸೋದರಿಂದ ಆಗೋ ವಾಯುಮಾಲಿನ್ಯ ತಡೆಯಲು, ಇಲ್ಲಿ ಪಟಾಕಿ ಸಿಡಿಸೋಕೂ ಒಂದು ನಿಗದಿತ ಸಮಯ ಫಿಕ್ಸ್ ಮಾಡಿದೆ. ಅದೇನೂ ಹೇಳ್ತೀವಿ ನೋಡಿ.
ದೀಪಾವಳಿ ಅಂದ್ರೇನೆ ದೀಪಗಳ ಹಬ್ಬ. ಪಟಾಕಿ ಸಿಡಿಸಿ ಸಂಭ್ರಮಿಸೋದೇ ಈ ಹಬ್ಬದ ಇನ್ನೊಂದು ವಿಶೇಷ.ಪಶ್ಚಿಮ ಬಂಗಾಳದಲ್ಲಿ ಪಟಾಕಿ ಸಿಡಿಸೋಕೆ ಅವಕಾಶ ಇದೆ.ಆದರೆ ಅದು ಗ್ರೀನ್ ಪಟಾಕಿ ಅನ್ನು ಮಾತ್ರ. ಈ ಪಟಾಕಿ ಸಿಡಿಸೋದರಿಂದ ಹೆಚ್ಚಿನ ಮಾಲಿನ್ಯ ಆಗೋದಿಲ್ಲ ಅನ್ನೋದು ಲೆಕ್ಕಾಚಾರ. ಹಾಗಂತ ಇಲ್ಲಿ ಹೇಗೆ ಬೇಕೋ ಹಾಗೆ, ಯಾವಾಗ ಬೇಕೋ ಆವಾಗ ಪಟಾಕಿ ಸಿಡಿಸೋ ಹಾಗಿಲ್ಲ. ಅದಕ್ಕೆ ಟೈಮ್ ಫಿಕ್ಸ್ ಆಗಿದೆ.
ದೀಪಾವಳಿ ಹಬ್ಬದ ದಿನ ರಾತ್ರಿ 8 ರಿಂದ 10 ಗಂಟೆ ಮಾತ್ರ ಪಟಾಕಿ ಸಿಡಿಬೇಕು. ಛಟ್ ಪೂಜೆಯ ದಿನ ಬೆಳಗ್ಗೆ 6 ರಿಂದ 8 ವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ.ಕ್ರಿಸ್ಮಸ್ ಹಬ್ಬ ಮತ್ತು ನ್ಯೂ ಇಯರ್ ದಿನವೂ ಪಟಾಕಿ ಹಾರಿಸೋರಿಗೆ ಚಾನ್ಸ್ ಇದೆ. ಆ ದಿನ ಕೇವಲ 35 ನಿಮಿಷ ಗ್ರೀನ್ ಪಟಾಕಿಯನ್ನ ರಾತ್ರಿ 11.55 ರಿಂದ 12.30 ರವರೆಗೆ ಮಾತ್ರ ಪಟಾಕಿ ಹೊಡೆದು ಕ್ರಿಸ್ಮಸ್ ಹಬ್ಬವನ್ನ ನ್ಯೂ ಇಯರ್ ಅನ್ನ ಸೆಲೆಬ್ರೇಟ್ ಮಾಡಬಹುದಾಗಿದೆ. ಈ ಗೈಡಲೈನ್ಸ್ ಗಳನ್ನ ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಲಿಖಿತ ರೂಪದಲ್ಲಿಯೇ ಹೊರಡಿಸಿದೆ.
PublicNext
27/10/2021 11:57 am