ಚೆನ್ನೈ: ಸಿಬಿಐ ಸಂಸ್ಥೆಯು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಅದು ರಾಜಕೀಯ ಹಿಡಿತದಿಂದ ಮುಕ್ತವಾಗಿರಬೇಕು. ಸಂಸತ್ತಿಗೆ ಮಾತ್ರವೇ ಅದು ವರದಿ ಸಲ್ಲಿಸುವಂತಾಗಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾದಂತೆ ಸಿಬಿಐ ಕೂಡ ಸ್ವಾಯತ್ತವಾಗಿರಬೇಕು. ಅದರಂತೆ ಸಂಸತ್ತಿಗೆ ಮಾತ್ರ ಹೊಣೆಗಾರನಾಗಿರಬೇಕು' ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 'ಈ ಆದೇಶವು ಪಂಜರದಲ್ಲಿರುವ ಗಿಳಿಯನ್ನು ಬಿಡುಗಡೆ ಮಾಡುವ ಪ್ರಯತ್ನವಾಗಿದೆ' ಎಂದಿರುವ ನ್ಯಾಯಾಲಯ, ಪ್ರಸ್ತುತದ ವ್ಯವಸ್ಥೆ ಕುರಿತು 12 ಅಂಶಗಳ ಸೂಚನೆಯನ್ನು ನೀಡಿದೆ.
'ಸಿಬಿಐಗೆ ಆದಷ್ಟು ಬೇಗನೇ ಹೆಚ್ಚಿನ ಅಧಿಕಾರದೊಂದಿಗೆ ಶಾಸನಬದ್ಧ ಮಾನ್ಯತೆ ಹಾಗೂ ವ್ಯಾಪ್ತಿಗಳನ್ನು ನೀಡಲು ಪ್ರತ್ಯೇಕ ಕಾಯ್ದೆ ರೂಪಿಸಲು ನಿರ್ಧಾರ ತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಸೂಚಿಸಲಾಗಿದೆ. ಸರ್ಕಾರದ ಆಡಳಿತಾತ್ಮಕ ನಿಯಂತ್ರಣವಿಲ್ಲದೆ ಕಾರ್ಯನಿರ್ವಹಣೆ ಸ್ವಾಯತ್ತತೆ ಜತೆ ಸಿಬಿಐ ಅನ್ನು ಸ್ವತಂತ್ರಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು' ಎಂದು ಕೋರ್ಟ್ ಹೇಳಿದೆ.
PublicNext
18/08/2021 01:41 pm