ಸ್ಯಾಕ್ರಮೆಂಟೊ (ಕ್ಯಾಲಿಫೋರ್ನಿಯಾ): ಸೆಕ್ಸ್ ವೇಳೆ ಒಮ್ಮತವಿಲ್ಲದೆ ಕಾಂಡೋಮ್ ತೆಗೆಯುವುದು ಅಪರಾಧ ಎಂದು ಕ್ಯಾಲಿಫೋರ್ನಿಯಾ ಸರ್ಕಾರವು ಹೊಸ ಕಾನೂನು ಜಾರಿಗೆ ತಂದಿದೆ.
ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸೊಮ್ ಗುರುವಾರ ಈ ಹೊಸ ಕಾನೂನಿಗೆ ಸಹಿ ಹಾಕಿದ್ದಾರೆ. ಸಂಭೋಗದ ಸಮಯದಲ್ಲಿ ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದನ್ನು ಕದಿಯುವುದು (stealthing) ಎಂದು ವ್ಯಾಖ್ಯಾನಿಸಲಾಗಿದೆ. ಅಮೆರಿಕದಲ್ಲಿ ಇಂತಹ ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕ್ಯಾಲಿಫೋರ್ನಿಯಾಗೆ ಸಲ್ಲುತ್ತದೆ.
ಒಪ್ಪಿಗೆಯಿಲ್ಲದೆ ನಡೆಸಿದರೆ, ಲೈಂಗಿಕ ಸಮಯದಲ್ಲಿ ಕಾಂಡೋಮ್ ತೆಗೆಯುವುದನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣದ ಸಂತ್ರಸ್ತರು ಆರೋಪಿ ವಿರುದ್ಧ ದೂರು ದಾಖಲಿಸಬಹುದು.
PublicNext
09/10/2021 04:23 pm