ದೆಹಲಿ: ಅನ್ನದಾತರ ನಿರಂತರ ಹೋರಾಟಕ್ಕೆ ಬೆಂಬಲ ಸೂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಸಾಥ್ ನೀಡುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆಳು ಹೆಚ್ಚಾಗಿವೆ.
ಇದರ ಮಧ್ಯೆ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಈಗ ರೈತರ ಪ್ರತಿಭಟನೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗುತ್ತಿದೆ.ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ ಗ್ರೇಟಾ ಥುನ್ ಬರ್ಗ್ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ನಮ್ಮ ಬೆಂಬಲವಿದೆ ಎಂದು ಬರೆದುಕೊಂಡಿದ್ದರು.
ಈ ಮೂಲಕ ರೈತರ ಪ್ರತಿಭಟನೆ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುವಂತೆ ಮಾಡಿದ್ದರು. ಅಲ್ಲದೆ, ಗ್ರೇಟಾ ಥುನ್ಬರ್ಗ್ ಮಾಡಿದ ಟ್ವೀಟ್ ಕೇಂದ್ರ ಸರ್ಕಾರಕ್ಕೆ ಇರಿಸುಮುರಿಸು ತಂದಿಟ್ಟಿತ್ತು. ಈ ಬೆನ್ನಲ್ಲೇ ಈಗ ಗ್ರೇಟಾ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಇನ್ನು, ಗ್ರೇಟಾ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯ, ಕೆಲವು ಪಟ್ಟಭದ್ರ ಗುಂಪುಗಳು ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆಯುತ್ತಿರುವುದು ದುರದೃಷ್ಟಕರ ಎಂದು ಹೇಳಿತ್ತು.
ಅಂತಾರಾಷ್ಟ್ರೀಯ ಪಿತೂರಿ ಆರೋಪ ಹಿನ್ನೆಲೆಯಲ್ಲಿ ಗ್ರೇಟಾ ವಿರುದ್ಧ ಎಫ್ ಐಆರ್ ದಾಖಲಾದ ಬೆನ್ನಲ್ಲೇ ಉತ್ತರಿಸಿರುವ ಗ್ರೇಟಾ, ಈಗಲೂ ನಾನು ಭಾರತೀಯ ರೈತರ ಪರವಿದ್ದೇನೆ. ಬೆದರಿಕೆಗಳಿಂದ ನನ್ನ ನಿರ್ಧಾರ ಬದಲಿಸಲು ಆಗುವುದಿಲ್ಲ ಎಂದು ಟ್ವೀಟ್ ಮಾಡಿ ಟ್ವೀಟ್ ಮಾಡಿ ಸಮರ್ಥನೆ ನೀಡಿದ್ದಾರೆ.
PublicNext
04/02/2021 05:51 pm