ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿನಿ, ಮಿಡಿ ಧರಿಸಿ ಬರಬಹುದೇ? ಹಿಜಾಬ್ ವಿಚಾರಣೆ ವೇಳೆ ಸುಪ್ರೀಂ ಪ್ರಶ್ನೆ

ನವದೆಹಲಿ: ಹಿಜಾಬ್ ನಿರ್ಬಂಧಿಸಿ, ಸಮವಸ್ತ್ರ ಕಡ್ಡಾಯ ಮಾಡಿದ್ದ ಸರಕಾರದ ಆದೇಶ ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿದ್ಯಾರ್ಥಿಗಳು ಮಿನಿ, ಮಿಡಿ ಧರಿಸಿ ಬರಬಹುದೇ? ಎಂದು ಪ್ರಶ್ನಿಸಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಈ ಕೇಳಿದ ಪ್ರಶ್ನೆ.ಹೈಕೋರ್ಟ್ ಆದೇಶ ಪ್ರಶ್ನಿಸಿ 23 ಮೇಲ್ಮನವಿಗಳು ಸಲ್ಲಿಕೆಯಾಗಿದ್ದು, ಸೋಮವಾರ ವಿಚಾರಣೆ ನಡೆಸಿದ ನ್ಯಾಯಪೀಠ, “ನಿಮಗೆ ಧಾರ್ಮಿಕ ಹಕ್ಕುಗಳಿರಬಹುದು. ಹಾಗಂತ, ನಿಗದಿತ ಸಮವಸ್ತ್ರವಿರುವಂಥ ಶೈಕ್ಷಣಿಕ ಸಂಸ್ಥೆಗಳೊಳಗೆ ಈ ಹಕ್ಕನ್ನು ಒಯ್ಯುವುದು ಸರಿಯೇ? ಅವರು ನಿಮ್ಮ ಶಿಕ್ಷಣದ ಹಕ್ಕನ್ನು ಕಸಿಯುತ್ತಿಲ್ಲ. ಬದಲಿಗೆ ಸಮವಸ್ತ್ರದೊಂದಿಗೆ ಬನ್ನಿ ಎಂದಷ್ಟೇ ಹೇಳುತ್ತಿದ್ದಾರೆ’ ಎಂದು ಹೇಳಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಸಂಜಯ್ ಹೆಗಡೆ, “ಬೆಳೆದಿರುವ ಮಹಿಳೆಗೆ ತನ್ನ ಘನತೆಯನ್ನು ಕಾಪಾಡಿಕೊಳ್ಳುವ ಕುರಿತು ತನ್ನದೇ ಆದ ಪರಿಕಲ್ಪನೆಯಿರುತ್ತದೆ. ಅಂಥ ಆಲೋಚನೆ ಮೇಲೆ ಆಕೆಗೇ ನಿಯಂತ್ರಣವಿರಬಾರದು ಎಂದು ನೀವು ಆಕೆಗೆ ಹೇಳುತ್ತೀರಾ?’ ಎಂದು ಕೇಳಿದರು.

ಹೆಗಡೆ, ಅವರ ವಾದವನ್ನು ಆಲಿಸಿದ ಬಳಿಕ ನ್ಯಾ. ಗುಪ್ತಾ ಅವರು, “ಅದು ಧಾರ್ಮಿಕ ಸಂಪ್ರದಾಯವಾಗಿರಬಹುದು. ಆದರೆ, ನಿಗದಿತ ಸಮವಸ್ತ್ರವಿರುವಂಥ ಶಾಲೆಗಳಿಗೆ ಹಿಜಾಬ್ ಧರಿಸಿಕೊಂಡು ಹೋಗಬಹುದೇ ಎನ್ನುವುದು ಇಲ್ಲಿರುವ ಪ್ರಶ್ನೆ’ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಪರ ವಕಾಲತ್ತು ವಹಿಸಿದ್ದ ಅಡ್ವೊಕೇಟ್ ಜನರಲ್ ಪಿ. ನಾವದಗಿ, “ಇಲ್ಲಿ ಸರ್ಕಾರ ಯಾರ ಹಕ್ಕುಗಳನ್ನೂ ಕಸಿದುಕೊಂಡಿಲ್ಲ. ಆಯಾ ಸಂಸ್ಥೆಗಳ ನಿಯಮಗಳನ್ನು ಪಾಲಿಸಿ ಎಂದಷ್ಟೇ ಹೇಳಿದೆ.

Edited By : Nirmala Aralikatti
PublicNext

PublicNext

06/09/2022 10:54 pm

Cinque Terre

62.84 K

Cinque Terre

33

ಸಂಬಂಧಿತ ಸುದ್ದಿ