ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀಟ್ ಪಿಜಿ ಕೌನ್ಸೆಲಿಂಗ್: OBC, EWS ಮೀಸಲಾತಿ ಎತ್ತಿಹಿಡಿದ 'ಸುಪ್ರೀಂ'

ನವದೆಹಲಿ: ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಖಿಲ ಭಾರತ ಕೋಟಾ (AIQ) ಸೀಟ್‌ಗಳಲ್ಲಿ ಕೇಂದ್ರ ಸರ್ಕಾರವು ತಂದಿರುವ ಆರ್ಥಿಕವಾಗಿ ದುರ್ಬಲ ವರ್ಗದವರು (EWS) ಮತ್ತು ಇತರ ಹಿಂದುಳಿದ ವರ್ಗ (OBC) ಮೀಸಲಾತಿಯನ್ನು ಆಧರಿಸಿ 2021-22ನೇ ಸಾಲಿಗೆ NEET-PG ಕೌನ್ಸೆಲಿಂಗ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠವು ಒಬಿಸಿಗೆ (OBC) ಶೇ. 27 ಮತ್ತು ನೀಟ್-ಯುಜಿ(NEET-UG) ಮತ್ತು ನೀಟ್-ಪಿಜಿಯಲ್ಲಿ(NEET-PG) ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇಕಡಾ 10ರಷ್ಟು ಮೀಸಲಾತಿ ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. ಆದರೆ ಇಡಬ್ಲ್ಯೂಎಸ್(EWS) ವರ್ಗಕ್ಕೆ ವರ್ಷಕ್ಕೆ 8 ಲಕ್ಷ ರೂಪಾಯಿ ಆದಾಯದ ಮಾನದಂಡದ ತಾರ್ಕಿಕತೆಯನ್ನು ಮಾರ್ಚ್ ತಿಂಗಳಲ್ಲಿ ನಿರ್ಣಯಿಸುವುದಾಗಿ ಹೇಳಿದೆ.

Edited By : Vijay Kumar
PublicNext

PublicNext

07/01/2022 04:22 pm

Cinque Terre

116.7 K

Cinque Terre

0

ಸಂಬಂಧಿತ ಸುದ್ದಿ