ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದಲ್ಲಿ ಕಂಗೊಳಿಸುತ್ತಿದೆ ಕ್ಲಾಕ್ ಟವರ್..

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸ್ವಾತಂತ್ರ್ಯೋತ್ಸವ ಸಿದ್ಧತೆ ಭರದಿಂದ ಸಾಗುತ್ತಿದೆ. ಶ್ರೀನಗರದಲ್ಲಿರುವ ಲಾಲ್ ಚೌಕ್ ನಲ್ಲಿರುವ ಕ್ಲಾಕ್ ಟವರ್ (ಘಂಟಾ ಘರ್-ಗಡಿಯಾರ ಗೋಪುರ) ಇಂದು ಸಂಫೂರ್ಣವಾಗಿ ತ್ರಿವರ್ಣ ಧ್ವಜದಂತೆ ಪ್ರಕಾಶಿಸುತ್ತಿದೆ. ಗಡಿಯಾರ ಗೋಪುರಕ್ಕೆ ಪೂರ್ತಿಯಾಗಿ ರಾಷ್ಟ್ರಧ್ವಜದಂತೆ ಲೈಟಿಂಗ್ ಮಾಡಲಾಗಿದೆ. ಕೇಸರಿ-ಬಿಳಿ-ಹಸಿರು ಬಣ್ಣಗಳಿಂದ ಕಂಗೊಳಿಸುತ್ತಿರುವ ಕ್ಲಾಕ್ ಟವರ್ ನೋಡಿ ಸ್ಥಳೀಯರು ಫುಲ್ ಖುಷಿಯಾಗಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15) ಇದೆ. ಅದರ ನಿಮಿತ್ತ ಈ ಗಡಿಯಾರ ಗೋಪುರಕ್ಕೆ ರಾಷ್ಟ್ರಧ್ವಜದ ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀನಗರ ಮೇಯರ್ ಜುನೈಡ್ ಮಟ್ಟು ಟ್ವೀಟ್ ಮಾಡಿದ್ದಾರೆ. 2019ರ ಆಗಸ್ಟ್ 5ರಂದು ಇಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರಕ್ಕೆಂದೇ ಇದ್ದ ಪ್ರತ್ಯೇಕ ಧ್ವಜ ನಿಷ್ಕ್ರಿಯವಾಗಿದೆ. ಈ ಕ್ಲಾಕ್ ಟವರ್ ಇರುವ ಲಾಲ್ ಚೌಕ್ ಸೂಕ್ಷ್ಮ ಪ್ರದೇಶವಾಗಿದ್ದು, ಸ್ವಾತಂತ್ರ್ಯ ದಿನ ಹಿನ್ನೆಲೆಯಲ್ಲಿ ಇಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗುತ್ತಿದೆ.

Edited By : Nirmala Aralikatti
PublicNext

PublicNext

07/08/2021 10:21 am

Cinque Terre

63.18 K

Cinque Terre

1

ಸಂಬಂಧಿತ ಸುದ್ದಿ