ಕೊಪ್ಪಳ:ವೀಕೆಂಡ್ ಕರ್ಫ್ಯೂವನ್ನೂ ಲೆಕ್ಕಿಸದೆ ಕೋಳಿ ಜೂಜು ಆಡಿರೋ ಘಟನೆ ಕಾರಟಗಿ ತಾಲೂಕಿನ ಚಳ್ಳೂರು ಕ್ಯಾಂಪಿನಲ್ಲಿ ನಡೆದಿದೆ.
ಚಳ್ಳೂರು ಕ್ಯಾಂಪಿನ ಹೊರವಲದಯಲ್ಲಿಯೇ ಕೋಳಿ ಜೂಜಾಟ ನಡೆದಿದೆ. ಇಲ್ಲಿ ಸಾಮಾಜಿಕ ಅಂತರವೂ ಇಲ್ಲ. ಮಾಸ್ಕ್ ಅಂತೂ ಧರಿಸಿಯೇ ಇಲ್ಲ.
ಸಂಕ್ರಾಂತಿ ಹಬ್ಬದ ಪ್ರಯುಕ್ತವೇ ಈ ಕೋಳಿ ಪಂದ್ಯ ಆಯೋಜನೆ ಆಗಿದೆ. ಆದರೆ ಇಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ. ಕಾರಟಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಈ ಕೋಳಿ ಜೂಜು ಪಂದ್ಯ ನಡೆದಿದೆ.
PublicNext
16/01/2022 05:06 pm