ಕನ್ನೂಜ್: ಉತ್ತರ ಪ್ರದೇಶದಲ್ಲಿ ಹಲವು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳ ಕಣ್ಣಿಗೆ ಸಂಪತ್ತಿನ ಸಾಮ್ರಾಜ್ಯವೇ ಕಣ್ಣಿಗೆ ಬೀಳುತ್ತಿದೆ.
ಹಲವು ಉದ್ಯಮಿಗಳ ಮನೆಗೆ ಲಗ್ಗೆ ಇಟ್ಟ ಐಟಿ ಅಧಿಕಾರಿಗಳು ಅಕ್ರಮ ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ. ಅದರಂತೆ ಇಂದು ಕೂಡ ಕನ್ನೂಜ್ ನಗರದ ಸುಗಂಧ ದ್ರವ್ಯ ಉದ್ಯಮಿ ಫೈಜಾನ್ ಮಲಿಕ್ ಅವರ ಮನೆಯಲ್ಲಿ ವಿಚಾರಣೆ ಅಂತ್ಯಗೊಳಿಸಿದ ಅಧಿಕಾರಿಗಳು ದಾಖಲೆ, ನಗದು ಹಣ ಸೇರಿ ಅಕ್ರಮ ಸಂಪತ್ತನ್ನು ವಶಕ್ಕೆ ಪಡೆದು ಸೂಟ್‌ಕೇಸ್ ಮೂಲಕ ಕೊಂಡೊಯ್ದಿದ್ದಾರೆ. ಈ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿತ್ತು.
PublicNext
01/01/2022 06:36 pm