ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ಕ್ಯಾತೆ ತೆಗೆದ ಚೀನಾ: ಗಡಿಯಲ್ಲಿ ಮೂರು ಗ್ರಾಮ ನಿರ್ಮಾಣ

ನವದೆಹಲಿ: ಭಾರತದ ಗಡಿಯಲ್ಲಿ ಚೀನಾ ಮತ್ತೆ ತನ್ನ ಪುಂಡಾಟವನ್ನು ಮುಂದುವರಿಸಿದೆ. ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಮೂರು ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ.

ಪಶ್ಚಿಮ ಅರುಣಾಚಲ ಪ್ರದೇಶದ ಭಾರತ, ಚೀನಾ ಮತ್ತು ಭೂತಾನ್ ನಡುವಿನ ತ್ರಿ-ಜಂಕ್ಷನ್‍ಗೆ ಸಮೀಪದಲ್ಲಿರುವ ಬಮ್ ಲಾ ಪಾಸ್‍ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಚೀನಾ 3 ಗ್ರಾಮಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾಗೆ ಗಡಿ ವಿವಾದವಿದೆ. ಹೀಗಾಗಿ ಇಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡಿ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸುವ ಯೋಜನೆ ರೂಪಿಸಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಜಿಯೋಸ್ಟ್ರಾಟೆಜಿಸ್ಟ್ ಡಾ. ಬ್ರಹ್ಮ ಚೆಲ್ಲಾನಿ ಚೀನಾ ತನ್ನ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸಲು ಮತ್ತು ಗಡಿಯಲ್ಲಿ ಒಳನುಸುಳುವಿಕೆಯನ್ನು ಹೆಚ್ಚಿಸಲು ಹಾನ್ ಚೈನೀಸ್ ಮತ್ತು ಟಿಬೆಟಿಯನ್ ಸದಸ್ಯರನ್ನು ಭಾರತದ ಗಡಿಯಲ್ಲಿ ನೆಲೆಸುವ ತಂತ್ರವನ್ನು ಬಳಸುತ್ತಿದೆ. ಈ ಹಿಂದೆಯೂ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ಮೀನುಗಾರರನ್ನು ಈ ತಂತ್ರಗಾರಿಕೆಗೆ ಬಳಸಿಕೊಂಡಿತ್ತು ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

06/12/2020 10:59 pm

Cinque Terre

37.42 K

Cinque Terre

3

ಸಂಬಂಧಿತ ಸುದ್ದಿ