ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಿಂದ ಹಕ್ಕುಚ್ಯುತಿ ನೋಟಿಸ್ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ರಿಲೀಫ್ ಕೊಟ್ಟಿದೆ. ಆದರೆ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಯವರಿಗೆ ನೋಟಿಸ್ ಜಾರಿ ಮಾಡಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣದ ಮಾದ್ಯಮ ಚರ್ಚೆಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಗೋಸ್ವಾಮಿ ಅವರಿಗೆ ಮಹಾರಾಷ್ಟ್ರ ಸರ್ಕಾರ ನೋಟಿಸ್ ನೀಡಿತ್ತು. ಅಕ್ಟೋಬರ್ 13ರಂದು ಗೋಸ್ವಾಮಿಯವರಿಗೆ ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ಈ ಪತ್ರವನ್ನು ಬರೆದಿದ್ದರು.
"ಈ ಪತ್ರ ಬರೆದವರ ಬಗ್ಗೆ ನಮಗೆ ಗಂಭೀರ ಪ್ರಶ್ನೆ ಇದೆ. ಇದನ್ನು ಕಡೆಗಣಿಸುವುದು ನಮಗೆ ಅಸಾಧ್ಯವಾಗಿದೆ. ಗೋಸ್ವಾಮಿ ಅವರ ವಿರುದ್ಧ ವಿಧಾನಸಭೆ ಹೊರಡಿಸಿದ ಹಕ್ಕುಚ್ಯುತಿ ನೋಟಿಸ್ ಅನುಸಾರವಾಗಿ ಅವರನ್ನು ಬಂಧಿಸಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಹೇಳಿದ್ದಾರೆ.
PublicNext
06/11/2020 04:45 pm