ಗದಗ: ದೇವರ ದರ್ಶನ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ಕ್ರೂಸರ್ ವಾಹನವೊಂದು ಪಲ್ಟಿಯಾಗಿದೆ. ಈ ಘಟನೆ ನರಗುಂದ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಮೀಪದ ಹಳ್ಳಿಕೇರಿಮಡ್ಡಿ ಬಳಿ ನಡೆದಿದೆ.
ಪಲ್ಟಿಯಾಗಿರುವ ಕ್ರೂಸರ್ ವಾಹನದಲ್ಲಿದ್ದವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ದರ್ಶನ ಮುಗಿಸಿ ವಾಪಸ್ ತೆರಳುತ್ತಿದ್ದರು ಎನ್ನಲಾಗಿದೆ. ದರ್ಶನ ಮುಗಿಸಿಕೊಂಡು ಹುಬ್ಬಳ್ಳಿಯಿಂದ ಮರಳಿ ಯಾದಗಿರಿಗೆ ಹೊರಟಿದ್ದ ಕ್ರೂಸರ್ ವಾಹನಕ್ಕೆ ಏಕಾಏಕಿ ಟ್ರ್ಯಾಕ್ಟರ್ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
PublicNext
29/08/2022 10:38 pm