ಮನುಷ್ಯನ ಜೀವನ ಶೈಲಿ ಬದಲಾಗಿದೆ. ಇದರಿಂದ ಆಹಾರ ಸೇವನೆಯ ಟೈಮ್‌ನಲ್ಲೂ ವ್ಯತ್ಯಾಸಗಳಾಗುತ್ತಲೇ ಇವೆ.ಅನಾರೋಗ್ಯಕರ ಆಹಾರ ಕೂಡ ಫುಡ್ ಪಾಯಿಸನ್‌ಗೆ ಕಾರಣ ಆಗುತ್ತಿದೆ.ಆದರೆ ಫುಡ್ ಪಾಯಿಸನ್ ಆಗಿದೆ ಅಂತ ತಿಳಿಯೋದು ಹೇಗೆ ? ಅದನ್ನ ಗುಣಪಡಿಸುವ ದಾರಿ ಯಾವುದು ? ಇಲ್ಲಿದೆ ಒಂದಷ್ಟು ಟಿಪ್.
ಅಪೌಷ್ಠಿಕ ಆಹಾರ ಸೇವನೆಯಿಂದ ಆ ಕೂಡಲೇ ಫುಡ್ ಪಾಯಿಸನ್ ಲಕ್ಷಣಗಳು ಕಾಣುತ್ತವೆ. ಅವು ಇಂತಿವೆ.
-ವಾಂತಿ
-ವಾಕರಿಕೆ
-ಅತಿಸಾರ
-ಹೊಟ್ಟೆ ನೋವು
-ಜ್ವರ
-------
ಫುಡ್ ಪಾಯಿಸನ್ ಆಗದಿರಲು ಏನ್ ಮಾಡಬೇಕು ?
-ತರಕಾರಿ ಇತರ ಹಣ್ಣುಗಳ ಮನೆಗೆ ತಂದ ತಕ್ಷಣ ಕ್ಲೀನ್ ಆಗಿಯೇ ತೊಳೆಯಬೇಕು.
- ಅಡುಗೆ ಮಾಡುವ ಮುಂಚೆ ಮತ್ತು ನಂತರ ನಿಮ್ಮ ಕೈಗಳನ್ನ ಸ್ವಚ್ಛವಾಗಿಯೇ ತೊಳೆದುಕೊಳ್ಳಿ.
-ಮೊಟ್ಟೆ-ಮಾಂಸ-ಕೋಳಿಗಳನ್ನ ಅಡುಗೆಗೆ ಬಳಸುವ ಮುನ್ನ ಕ್ಲೀನ್ ಮಾಡಿ.
=====
ಫುಡ್ ಪಾಯಿಸನ್ ಲಕ್ಷಣಗಳು ಕಂಡು ಬಂದ್ರೆ ಮೊದಲು ಈ ಕೆಲಸ ಮಾಡಿ
-ದೇಹಕ್ಕೆ ವಿಶ್ರಾಂತಿ ಕೊಡಿ
-ಮೇಲಿಂದ ಮೇಲೆ ಆಹಾರ ಸೇವಿಸುತ್ತಿದ್ದರೇ ಅದನ್ನ ನಿಲ್ಲಿಸಿ ಬಿಡಿ
-ಸುಮಾರು ಒಂದರಿಂದ ಎರಡು ಗಂಟೆ ಏನೂ ಸೇವಿಸದೇ ಸುಮ್ಮನಿದ್ದು ಬಿಡಿ
- ಯಾವುದೇ ಪಾನೀಯವನ್ನೂ ಸೇವಿಸಲೇ ಬೇಡಿ
======
ಫುಡ್ ಪಾಯಿಸನ್ ಆದರೇ ಏನನ್ನ ಸೇವಿಸಬೇಕು
-ಬಾಳೆ ಹಣ್ಣು-ಅನ್ನ-ಸೇಬು-ಹಾಲು-ಬ್ರೆಡ್-ಚಪಾತಿ ಸೇವಿಸಬಹುದು.
ವಾಂತಿ-ಜ್ವರ-ಅತಿಸಾರ ಇವೆಲ್ಲ ಹೆಚ್ಚು ಕಂಡು ಬಂದರೆ ತಕ್ಷಣವೇ ವೈದ್ಯರನ್ನ ಸಂಪರ್ಕಿಸಿ.
PublicNext
16/12/2021 06:54 pm