ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಪ್ಪರೊಟ್ಟಿ ಅಥವಾ ಓಡುದೋಸೆ ಮಾಡುವ ವಿಧಾನ

ಕಪ್ಪ ರೊಟ್ಟಿ – ಕೆಲವರಿಗಂತೂ ಈ ಹೆಸರು ಹೊಸತೆನಿಸಬಹುದು. ವಿಶೇಷವೂ ಎನಿಸಬಹುದು. ಕಪ್ಪ ರೊಟ್ಟಿ ಕರಾವಳಿಯ ಹೆಸರುವಾಸಿಯಾದ ತಿಂಡಿ. ಇದನ್ನು ತಯಾರಿಸಲು ಅಕ್ಕಿ, ಉಪ್ಪು, ತೆಂಗಿನತುರಿ ಇಷ್ಟೇ ಸಾಮಗ್ರಿಗಳು ಸಾಕು. ಕೆಲವರು ಅನ್ನವನ್ನು ಸಹ ಇದರೊಂದಿಗೆ ಸೇರಿಸುತ್ತಾರೆ. ಈ ದೋಸೆಯ ವಿಶೇಷವೇನೆಂದರೆ ಇದನ್ನು ಸಾಂಪ್ರದಾಯಿಕ ಮಣ್ಣಿನ ಕಾವಲಿಯ ಮೇಲೆ ಮಾಡುತ್ತಾರೆ. ಈ ಕಾವಲಿಯನ್ನು ಹೆಂಚು ಮತ್ತು ತುಳುವಿನಲ್ಲಿ ಓಡು ಎಂದು ಸಹ ಕರೆಯುತ್ತಾರೆ. ಇನ್ನೊಂದು ವಿಶೇಷವೇನೆಂದರೆ ಇದನ್ನು ತಯಾರಿಸಲು ಎಣ್ಣೆ ಅಥವಾ ತುಪ್ಪವನ್ನು ಬಳಸಬೇಕಾಗಿಲ್ಲ. ಈ ದೋಸೆ ಕರಾವಳಿ ಕರ್ನಾಟಕದ ಪ್ರದೇಶಗಳಲ್ಲಿ ವಿವಿಧ ಹೆಸರುಗಳನ್ನು ಹೊಂದಿದೆ. ಕುಂದಾಪುರದಲ್ಲಿ ಇದನ್ನು ಹಂಚಿನ ದೋಸೆ ಹಾಗೂ ಇತರ ಕರಾವಳಿ ಭಾಗಗಳಲ್ಲಿ ಓಡು ದೋಸೆ, ಉಪ್ಪು ದೋಸೆ, ಓಡುಪ್ಪಲೆ ಎಂದು ಕರೆಯಲಾಗುತ್ತದೆ.

Edited By : Vijay Kumar
PublicNext

PublicNext

05/12/2021 08:22 am

Cinque Terre

26.63 K

Cinque Terre

0