ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗರಿಯಾದ ಪಾಲಕ್ ಅವಲಕ್ಕಿ ವಡೆ ಮಾಡುವ ವಿಧಾನ

ಸಾಯಂಕಾಲದ ಕಾಫಿಯೊಂದಿಗೆ ಸೇವಿಸಬಹುದಾದ ರುಚಿಯಾದ ಇನ್ನೊಂದು ಹೊಸ ತಿನಿಸು ಎಂದರೆ ಪಾಲಕ್ ವಡೆ. ಕಡ್ಲೆ ಬೇಳೆ, ತೆಳು ಅವಲಕ್ಕಿ ಮತ್ತು ಪಾಲಕ್ ಸೊಪ್ಪಿನ ಜೊತೆ ಬೇರೆಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಅಕ್ಕಿ ಹಿಟ್ಟನ್ನು ಬೆರೆಸಿ, ಮಾಡುವುದೇ ಪಾಲಕ್ ವಡೆ. ಇದನ್ನು ಸಮವಾಗಿ ಬಿಸಿಯಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರೆದು ಟೊಮೆಟೊ ಸಾಸ್ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಪಾಲಕ್‌ ಸೊಪ್ಪಿನಲ್ಲಿ ಕಬ್ಬಿಣಾಂಶ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಇದು ದೇಹದಲ್ಲಿನ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಮಕ್ಕಳು ಪಾಲಕ್ ಸೊಪ್ಪನ್ನು ಇಷ್ಟಪಡುವುದಿಲ್ಲ. ಈ ರೀತಿಯಾಗಿ ಮಾಡಿಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ. ಬನ್ನಿ ಹಾಗಾದರೆ ಪಾಲಕ್ ಅವಲಕ್ಕಿ ವಡೆ ಮಾಡುವ ವಿಧಾನವನ್ನು ನೋಡೋಣ.

Edited By : Vijay Kumar
PublicNext

PublicNext

23/11/2021 02:55 pm

Cinque Terre

25.6 K

Cinque Terre

0