ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಬೂಜದ ಮಿಲ್ಕ್ ಶೇಕ್

ಬೇಸಿಗೆ ಬಂತೆಂದರೆ ಜ್ಯೂಸ್ ಹಾಗೂ ಮಿಲ್ಕ್ ಶೇಕ್‌ಗಳನ್ನು ಕುಡಿಯಲು ಅಂಗಡಿಗಳಲ್ಲಿ ಜನ ಮುಗಿಬಿದ್ದಿರುತ್ತಾರೆ. ಆದರೆ ಅವರು ಯಾವ ರೀತಿಯ ಹಣ್ಣುಗಳನ್ನು ಉಪಯೋಗಿಸುತ್ತಾರೆಯೋ ಗೊತ್ತಿರುವುದಿಲ್ಲ. ಜೊತೆಗೆ ಹಣವು ಕೂಡ ಜಾಸ್ತಿ ಇರುತ್ತದೆ. ಆದ್ದರಿಂದ ನಾವು ಮನೆಯಲ್ಲಿಯೇ ಶುಚಿಯಾಗಿ, ರುಚಿಯಾಗಿ ಹಾಗು ಕಡಿಮೆ ಖರ್ಚಿನಲ್ಲಿ ಜ್ಯೂಸ್ ಹಾಗು ಮಿಲ್ಕ್ ಶೇಕ್ ಮಾಡಿಕೊಳ್ಳಬಹುದು. ಕರಬೂಜ ಹಣ್ಣು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಮಕ್ಕಳು ಇದನ್ನು ಹಾಗೆಯೇ ತಿನ್ನಲು ಹಿಂಜರಿಯುತ್ತಾರೆ. ಆದ್ದರಿಂದ ನಾವು ಇದರಿಂದ ಮಿಲ್ಕ್ ಶೇಕ್ ಮಾಡಿಕೊಟ್ಟರೆ ಇಷ್ಟಪಟ್ಟು ಕುಡಿಯುತ್ತಾರೆ. ಇದು ದೇಹಕ್ಕೂ ತಂಪು ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಈ ಮಿಲ್ಕ್ ಶೇಕ್‌ಗೆ ನಾವು ಸಣ್ಣಗೆ ಹೆಚ್ಚಿದ ಕರಬೂಜದ ಹಣ್ಣು ಮತ್ತು ಪಿಸ್ತಾ, ಬಾದಾಮಿ ಹಾಗೂ ಗೋಡಂಬಿ ಚೂರುಗಳನ್ನು ಹಾಕುವುದರಿಂದ ಕುಡಿಯುವಾಗ ಬಾಯಿಗೆ ಸಿಗುತ್ತವೆ. ಇದರಿಂದ ಕುಡಿಯುವಾಗ ಇನ್ನು ಹೆಚ್ಚು ಮಜ ಬರುತ್ತದೆ. ಮಕ್ಕಳೂ ಕೂಡ ಮಾಡಬಹುದು ಅಷ್ಟೊಂದು ಸರಳವಾದ ವಿಧಾನ. ಕೆಲವೇ ನಿಮಿಷಗಳಲ್ಲಿ ತಯಾರಾಗುವ ಶೇಕ್ ಇದು. ಡಯಟ್ ಮಾಡುವವರು ಸಕ್ಕರೆ ಹಾಕದೇ ಹಾಗೆ ಮಾಡಿಕೊಂಡು ಬೆಳಗಿನ ಉಪಹಾರದ ಬದಲಿಗೆ ಸೇವಿಸಬಹುದು. ತುಂಬಾ ಹೊತ್ತು ಹೊಟ್ಟೆ ತುಂಬಿದ ಅನುಭವ ಇರುತ್ತದೆ. ಬನ್ನಿ ಹಾಗಾದರೆ ಥಟ್ ಅಂತ ಮಾಡುವ ವಿಧಾನವನ್ನು ನೋಡೋಣ.

Edited By : Vijay Kumar
PublicNext

PublicNext

21/11/2021 03:24 pm

Cinque Terre

33.56 K

Cinque Terre

0