ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾಬಾ ಶೈಲಿಯ ದಾಲ್ ಫ್ರೈ

ಬೇಕಾಗುವ ಪದಾರ್ಥಗಳು ಕಡಲೇಬೇಳೆ 1/4 ಕಪ್ ತೊಗರಿ ಬೇಳೆ 1/4 ಕಪ್ ಮಸೂರ್ ದಾಲ್ 1/4 ಕಪ್ ಹೆಸರು ಬೇಳೆ 1/4 ಕಪ್ ಉದ್ದಿನ ಬೇಳೆ 2 ಚಮಚ ರುಚಿಗೆ ತಕ್ಕಷ್ಟು ಉಪ್ಪು ಎಣ್ಣೆ 1/4 ಕಪ್ ಜೀರಿಗೆ 1 ಚಮಚ ತುಪ್ಪ 1 ಚಮಚ ಒಣ ಕೆಂಪು ಮೆಣಸಿನಕಾಯಿ 1 ಈರುಳ್ಳಿ 1 ಕಪ್ ಬೆಳ್ಳುಳ್ಳಿ 4 ಶುಂಠಿ 1/4 ಚಮಚ ಹಸಿರು ಮೆಣಸಿನಕಾಯಿ 2 ಟೊಮೆಟೊ 1 ಕಪ್ ಕಸೂರಿ ಮೇತಿ 1/2 ಚಮಚ ಕೆಂಪು ಮೆಣಸಿನ ಪುಡಿ 1 ಚಮಚ ಅರಿಶಿನ ಪುಡಿ 1/2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಚಮಚ ನಿಂಬೆ ಹಣ್ಣು ಅರ್ಧ

ತಯಾರಿಸುವ ವಿಧಾನ * ಎಲ್ಲಾ ಬೇಳೆಗಳನ್ನು ಅರ್ಧ ಗಂಟೆ ನೆನೆಸಿಡಿ. * ಪ್ರೆಶರ್ ಕುಕ್ಕರ್ ನಲ್ಲಿ ಬೇಳೆಗಳು, ನೀರು, ಅರಿಶಿನ ಪುಡಿ ಸೇರಿಸಿ 3-5 ಸೀಟಿಗಳಿಗೆ ಬೇಯಿಸಿ. * ನಂತರ ಬೇಯಿಸಿದ ದಾಲ್ ಅನ್ನು ಮ್ಯಾಶ್ ಮಾಡಿ. * ಬಾಣಲೆಗೆ ಎಣ್ಣೆ ಹಾಕಿ ನಂತರ ಜೀರಿಗೆ, ಹಿಂಗು ಮತ್ತು ಈರುಳ್ಳಿ ಸೇರಿಸಿ. ನಂತರ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ. * ಮಿಶ್ರಣವನ್ನು ಒಂದೆರಡು ನಿಮಿಷ ಹುರಿದು ನಂತರ ಹಸಿ ಮೆಣಸಿನಕಾಯಿ, ಟೊಮೆಟೊಗಳನ್ನು ಸೇರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಿ, ನಂತರ ಕೆಂಪು ಮೆಣಸಿನ ಪುಡಿ , ಕಸೂರಿ ಮೇತಿ ಮಸಾಲಾ ಮಿಶ್ರಣದಲ್ಲಿ ಸೇರಿಸಿ. * ಎಣ್ಣೆಯು ಮಸಾಲೆಯನ್ನು ಬೇರ್ಪಡಿಸಿದ ನಂತರ, ಬೇಯಿಸಿದ ದಾಲ್ ಸೇರಿಸಿ ಮತ್ತು ಸ್ಥಿರತೆಯನ್ನು ಪರಿಶೀಲಿಸಿ, ಸ್ವಲ್ಪ ನೀರು ಸೇರಿಸಿ. * ಉಪ್ಪು ಸೇರಿಸಿ 10-12 ನಿಮಿಷ ಕುದಿಸಿ ನಿಂಬೆ ರಸ ಹಿಸುಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಡಾಬಾ ಶೈಲಿಯ ದಾಲ್ ಫ್ರೈ ರೆಡಿ.

Edited By : Nirmala Aralikatti
PublicNext

PublicNext

16/09/2021 06:17 pm

Cinque Terre

25.15 K

Cinque Terre

0