ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಢೀರನೆ ಮಾಡಿ ನೆಲ್ಲಿಕಾಯಿ ಉಪ್ಪಿನಕಾಯಿ!

ನೆಲ್ಲಿಕಾಯಿ ಬಳಸಿಕೊಂಡು ಮಾಡುವ ಕೆಲವೊಂದು ಅಡುಗೆ ವಿಧಾನಗಳನ್ನು ನಾನು ಈಗಾಗಲೇ ಹಂಚಿಕೊಂಡಿದ್ದೇನೆ. ನೆಲ್ಲಿಕಾಯಿ ಸಾರು, ನೆಲ್ಲಿಕಾಯಿ ಅನ್ನ ಅಷ್ಟೇ ಯಾಕೆ ನೆಲ್ಲಿಕಾಯಿ ಬಳಸಿಕೊಂಡು ಕೇಶತೈಲ ಮಾಡುವ ವಿಧಾನವನ್ನು ಕೂಡ ನೋಡಿಯಾಯಿತು. ಇವತ್ತು ನೆಲ್ಲಿಕಾಯಿ ಬಳಸಿ ದಿಢೀರಾಗಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ತಿಳಿಯೋಣ. ವಿಟಮಿನ್-ಸಿ ಯಿಂದ ಹೇರಳವಾಗಿರುವ ಈ ನೆಲ್ಲಿಕಾಯಿಯನ್ನು ನಿಯಮಿತ ರೂಪದಲ್ಲಿ ಸೇವಿಸಿದಲ್ಲಿ ಆರೋಗ್ಯಕ್ಕೆ ತುಂಬಾ ಉತ್ತಮ.

ಬೇಕಾಗುವ ಸಾಮಗ್ರಿಗಳು:

ನೆಲ್ಲಿಕಾಯಿ- 400 ಗ್ರಾಂ

ಒಣ ಕೆಂಪು ಮೆಣಸಿನಕಾಯಿ- 20

ಸಾಸಿವೆ- 3 ಚಮಚ

ಜೀರಿಗೆ- 2 ಚಮಚ

ಮೆಂತೆ ಬೀಜ- ಅರ್ಧ ಚಮಚ

ಅರಿಶಿನ ಪುಡಿ- ಅರ್ಧ ಚಮಚ

ಸಾಸಿವೆ ಎಣ್ಣೆ- 4 ಚಮಚ

ಉಪ್ಪು- 4 ರಿಂದ 5 ಚಮಚ

ಮಾಡುವ ವಿಧಾನ:

* 400 ಗ್ರಾಂ ನೆಲ್ಲಿಕಾಯಿಯನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ನೆಲ್ಲಿಕಾಯಿಯು ಮುಳುಗುವಷ್ಟು ನೀರನ್ನು ಹಾಕಿ. ಉಪ್ಪನ್ನು ಹಾಕಿ. ಮಧ್ಯಮ ಉರಿಯಲ್ಲಿ 6 ರಿಂದ 7 ನಿಮಿಷಗಳ ಕಾಲ ಕುದಿಸಿ.

* ಉರಿಯನ್ನು ನಿಲ್ಲಿಸಿ,ನೆಲ್ಲಿಕಾಯನ್ನು ನೀರಿನಿಂದ ತೆಗೆದು,ಕತ್ತರಿಸಿ ಹಾಗೂ ಬೀಜವನ್ನು ತೆಗೆಯಿರಿ.ಬೀಜಗಳನ್ನು ನಾವು ಉಪ್ಪಿನಕಾಯಿಯಲ್ಲಿ ಬಳಸುವುದಿಲ್ಲ.

* 20 ಒಣ ಮೆಣಸಿನಕಾಯಿ, 3 ಚಮಚ ಸಾಸಿವೆ, 2 ಚಮಚ ಜೀರಿಗೆ, ಅರ್ಧ ಚಮಚ ಮೆಂತೆ ಹಾಗೂ ಅರ್ಧ ಚಮಚ ಅರಶಿನ ಪುಡಿಯನ್ನು ರುಬ್ಬುವ ಜಾರಿನಲ್ಲಿ ಹಾಕಿ ಸ್ವಲ್ಪ ತರಿಯಾಗಿ ರುಬ್ಬಿಕೊಳ್ಳಿ.

* 4 ದೊಡ್ಡ ಚಮಚ ಸಾಸಿವೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿ, ತಯಾರಿಸಿದ ಮಸಾಲೆ ಪುಡಿಯನ್ನು ಒಂದೆರಡು ನಿಮಿಷಗಳ ಕಾಲ ಹುರಿಯಿರಿ.

* ಬೇಯಿಸಿದ ನೆಲ್ಲಿಕಾಯಿ ಚೂರುಗಳನ್ನು ಹಾಕಿ ಕಲಸಿ. ಚೆನ್ನಾಗಿ ಕಲಸಿ. ಮಸಾಲೆಗಳು ನೆಲ್ಲಿಕಾಯಿಯ ಜೊತೆ ಕೂಡಬೇಕು.

* ನೆಲ್ಲಿಕಾಯಿ ಉಪ್ಪಿನಕಾಯಿ ಈಗ ತಯಾರಾಗಿದೆ. ಗಾಳಿಯಾಡದ ಒಂದು ಡಬ್ಬಕ್ಕೆ ಹಾಕಿ ಶೇಖರ ಮಾಡಿಡಿ.

Edited By : Vijay Kumar
PublicNext

PublicNext

22/08/2021 10:13 pm

Cinque Terre

26.36 K

Cinque Terre

0