ಇವತ್ತು ನಾವು ಅಣಬೆ (ಮಶ್ರೂಮ್) ಪೆಪ್ಪರ್ ಫ್ರೈ ಮಾಡುವ ವಿಧಾನ ತಿಳಿಯೋಣ.
ಬೇಕಾಗುವ ಪದಾರ್ಥಗಳು:
ಎಣ್ಣೆ- 3-4 ಚಮಚ
ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
ಕರಿಬೇವು-ಸ್ವಲ್ಪ
ಹಸಿಮೆಣಸಿನ ಕಾಯಿ-3-4
ಅಣಬೆ- 400 ಗ್ರಾಂ
ಉಪ್ಪು-ರುಚಿಗೆತಕ್ಕಷ್ಟು
ಅರಿಶಿನದ ಪುಡಿ- ಸ್ವಲ್ಪ
ಕಾಳುಮೆಣಸಿನ ಪುಡಿ- 3-4 ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ನಿಂಬೆಹಣ್ಣಿನ ರಸ- ಅರ್ಧ ಚಮಚ
ಮಾಡುವ ವಿಧಾನ:
* ಮೊದಲಿಗೆ ಅಣಬೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
* ನಂತರ ಕರಿಬೇವು, ಈರುಳ್ಳಿ ಹಸಿಮೆಣಸಿನ ಕಾಯಿ ಹಾಗಿ ಕೆಂಪಗೆ ಹುರಿದುಕೊಳ್ಳಿ. ನಂತರ ಅಣಬೆ ಹಾಗೂ ಉಪ್ಪು, ಅರಿಶಿನದ ಪುಡಿ ಹಾಕಿ 3 ನಿಮಿಷ ಬೇಯಿಸಿಕೊಳ್ಳಿ. ನಂತರ ಅಣಬೆಯಲ್ಲಿ ನೀರು ಬಿಟ್ಟುಕೊಳ್ಳುತ್ತದೆ.
* ಬಳಿಕ ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಮತ್ತೆ 3 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆಹಣ್ಣಿನ ರಸ ಹಾಕಿ ಮಿಶ್ರಣ ಮಾಡಿದರೆ ಅಣಬೆ ಪೆಪ್ಪರ್ ಫ್ರೈ ಸವಿಯಲು ಸಿದ್ಧ.
PublicNext
10/08/2021 02:40 pm