ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸಾಲಾ ಸಿಗಡಿ ಫ್ರೈ ಮಾಡುವ ವಿಧಾನ

ಮಸಾಲಾ ಸೀಗಡಿ ಫ್ರೈ ಮಾಡುವ ವಿಧಾನ

ರುಚಿಯಾದ ಖಾರ ಮಸಾಲಾ ಸಿಗಡಿ ಫ್ರೈ ಮಾಡಿ.

ಬೇಕಾಗುವ ಸಾಮಾಗ್ರಿಗಳು

* ಸಿಗಡಿ – 250 ರಿಂದ 300 ಗ್ರಾಂ

* ಅಚ್ಚ ಖಾರದ ಪುಡಿ – 1 ಟೀ ಸ್ಪೂನ್

* ಅರಿಶಿನ- 1/4 ಟೀ ಸ್ಪೂನ್

* ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 1 ಟೀ ಸ್ಪೂನ್

* ಧನಿಯಾ ಪೌಡರ್ – 1 ಟೀ ಸ್ಪೂನ್

* ಜೀರಿಗೆ ಪೌಡರ್- 1/2 ಟೀ ಸ್ಪೂನ್

* ಸೋಂಪು ಪೌಡರ್ – 1/2 ಟೀ ಸ್ಪೂನ್

* ಗರಂ ಮಸಾಲ- 1/2 ಟೀ ಸ್ಪೂನ್

* ಈರುಳ್ಳಿ – 2 ಮಧ್ಯಮ ಗಾತ್ರದ್ದು (ಉದ್ದವಾಗಿ ಕತ್ತರಿಸಿಕೊಳ್ಳಬೇಕು)

* ಹಸಿ ಮೆಣಸಿನಕಾಯಿ – 4

* ಕರಿಬೇವು – 15 ರಿಂದ 20 ಎಲೆ

* ನಿಂಬೆ ರಸ – 1.5 ಟೀ ಸ್ಪೂನ್

* ಎಣ್ಣೆ- 3 ಟೀ ಸ್ಪೂನ್

* ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

* ಸಿಗಡಿಯನ್ನು ಚೆನ್ನಾಗಿ ಬಿಡಿಸಿಕೊಂಡು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಳ್ಳಿ. ಈಗ ಬೆಳ್ಳುಳ್ಳಿ-ಪೇಸ್ಟ್, ಅಚ್ಚ ಖಾರದ ಪುಡಿ, ಅರಿಶಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 30 ನಿಮಿಷ ಎತ್ತಿಟ್ಟುಕೊಳ್ಳಿ.

* ಸ್ಟೌವ್ ಆನ್ ಮಾಡ್ಕೊಂಡು ಪ್ಯಾನ್ ಇಟ್ಕೊಳ್ಳಿ. ಪ್ಯಾನ್ ಬಿಸಿ ಆಗುತ್ತಿದ್ದಂತೆ ಎಣ್ಣೆ ಹಾಕಿ.

* ಎಣ್ಣೆ ಬಿಸಿಯಾಗುತ್ತಿದ್ದ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಬೇಕು.

* ತದನಂತರ ಕತ್ತರಿಸಿದ ಹಸಿ ಮೆಣಸಿನಕಾತಿ, ಕರಿಬೇವು ಹಾಕಿ 2 ನಿಮಿಷ ಬಾಡಿಸಿಕೊಂಡ ನಂತರ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಸಿಗಡಿಯನ್ನು ಹಾಕಿ ಚೆನ್ನಾಗಿ ಮೂರರಿಂದ ಐದು ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕು.

* ನಂತರ ಧನಿಯಾ, ಜೀರಿಗೆ ಪೌಡರ್ ಹಾಕಿ ಚೆನ್ನಾಗಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿದ ನಂತರ ನಿಂಬೆ ರಸ ಮಿಕ್ಸ್ ಮಾಡಿದ್ರೆ ರುಚಿ ರುಚಿಯಾದ ಸ್ಪೈಸಿ ಮಸಾಲಾ ಸೀಗಡಿ ಫ್ರೈ ಸವಿಯಲು ಸಿದ್ದ.

* ಬಿಸಿ ಅನ್ನ ಅಥವಾ ನೀರ್ ದೋಸೆ, ಚಪಾತಿ, ಬಿಸಿ ರೊಟ್ಟಿಗೆ ಸಿಗಡಿ ಫ್ರೈ ಒಳ್ಳೆಯ ಕಾಂಬಿನೇಷನ್.

Edited By : Nirmala Aralikatti
PublicNext

PublicNext

13/02/2021 07:51 pm

Cinque Terre

25.77 K

Cinque Terre

0