ಕೇರಳ ಮತ್ತು ತಮಿಳುನಾಡುಗಳಲ್ಲಿ ತೆಂಗಿನ ಎಣ್ಣೆಯನ್ನುಎಲ್ಲಾ ಅಡುಗೆಗಳಿಗೆ ಬಳಕೆ ಮಾಡುತ್ತಾರೆ.
ಅಂತಹ ಎಣ್ಣೆಯನ್ನು ನಾವು ನಮ್ಮ ಕರ್ನಾಟಕದಲ್ಲಿ ಅಡುಗೆಗೆ ಬಳಸದೆ ಹೋದರು ಕನಿಷ್ಠಪಕ್ಷ ನಮ್ಮ ಸೌಂದರ್ಯ ವೃದ್ಧಿಗೆ ಬಳಕೆ ಮಾಡಬಹುದಲ್ಲವೇ? ನಮ್ಮ ಮುಖದ ಸೌಂದರ್ಯಕ್ಕೆ ಮತ್ತು ತಲೆಕೂದಲಿನ ಬೆಳವಣಿಗೆಗೆ ತೆಂಗಿನ ಎಣ್ಣೆಯ ಆರೋಗ್ಯ ಪ್ರಯೋಜನಗಳು ಜಾಸ್ತಿ..
ಚರ್ಮದ ಮಾಯಿಶ್ಚರೈಸರ್
ತೆಂಗಿನ ಎಣ್ಣೆಯಲ್ಲಿ ಫ್ಯಾಟಿ ಆಸಿಡ್ ಅಂಶ ಹೆಚ್ಚಾಗಿರುವ ಜೊತೆಗೆ ವಿಟಮಿನ್ ಈ ಅಂಶ ಅಪಾರವಾಗಿ ಕಂಡುಬರುತ್ತದೆ. ಹಾಗಾಗಿ ಇದೊಂದು ಅತ್ಯದ್ಭುತ ಸ್ಕಿನ್ ಮಾಯಿಸ್ಚರೈಸರ್ ಎಂದು ಹೇಳಬಹುದು.
ಒಣ ಚರ್ಮ ಸಮಸ್ಯೆ ಇದ್ದವರು, ತೆಂಗಿನ ಎಣ್ಣೆಯನ್ನು ಮೊದಲ ಆಯ್ಕೆಯಾಗಿ ಉಪಯೋಗ ಮಾಡುವುದು ಒಳ್ಳೆಯದು.
ಮುಖದ ಮೇಲಿನ ಮೇಕಪ್ ತೆಗೆಯಲು
ಮನೆಯಿಂದ ಹೊರ ನಡೆಯುವಾಗ ಮುಖದ ಮೇಲೆ ಹಾಕಿಕೊಂಡ ಮೇಕಪ್ ಜೊತೆಗೆ ತುಟಿಗಳ ಮೇಲಿರುವ ಲಿಪ್ಸ್ಟಿಕ್ ತೆಗೆದು ಹಾಕಲು ತೆಂಗಿನ ಎಣ್ಣೆ ಹೆಚ್ಚು ಪ್ರಯೋಜನಕ್ಕೆ ಬರಲಿದೆ.
ನೈಸರ್ಗಿಕವಾದ ಹೊಳಪು ನಿಮಗೆ ಸಿಗಲಿದೆ
ತೆಂಗಿನ ಎಣ್ಣೆ ನಿಮ್ಮ ಚರ್ಮದ ಮೇಲೆ ಅತ್ಯದ್ಭುತ ತಂತ್ರಗಾರಿಕೆಯ ವಿಧಾನದಲ್ಲಿ ಕೆಲಸ ಮಾಡಲಿದೆ. ಚರ್ಮದ ಮೃದುತ್ವವನ್ನು ಹೆಚ್ಚು ಮಾಡುವುದರ ಜೊತೆಗೆ ಮೊಡವೆ ಕಲೆಗಳನ್ನು ನಿವಾರಣೆ ಮಾಡಿ ನೈಸರ್ಗಿಕವಾದ ಕಾಂತಿ ನಿಮ್ಮದಾಗುವಂತೆ ಮಾಡುತ್ತದೆ.
ಚರ್ಮದ ಹೊಳಪು ಹೆಚ್ಚಾಗುತ್ತದೆ.
ಮೊಡವೆಗಳ ವಿರುದ್ಧ ಕೆಲಸ ಮಾಡುತ್ತದೆ
ತೆಂಗಿನ ಎಣ್ಣೆಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹೆಚ್ಚಾಗಿವೆ. ಹಾಗಾಗಿ ಮೊಡವೆ ಗುಳ್ಳೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಇದು ತನ್ನಲ್ಲಿನ ಫ್ಯಾಟಿ ಆಸಿಡ್ ಅಂಶಗಳಿಂದ ಕೊಂದು ಹಾಕುತ್ತದೆ.
ನೈಸರ್ಗಿಕವಾದ ಸನ್ ಸ್ಕ್ರೀನ್ ಎಂದರೆ ಅದು ತೆಂಗಿನೆಣ್ಣೆ
ಸುಮಾರು ಮೂವತ್ತು ನಿಮಿಷಗಳಿಗಿಂತ ಅಧಿಕವಾಗಿ ನಾವು ಸೂರ್ಯನ ಬಿಸಿಲಿನಲ್ಲಿ ಓಡಾಡುವುದಾದರೆ, ತೆಂಗಿನ ಎಣ್ಣೆಯನ್ನು ಮಾಯಿಸ್ಚರೈಸರ್ ಮತ್ತು ಸನ್ ಸ್ಕ್ರೀನ್ ರೀತಿಯಲ್ಲಿ ಬಳಕೆ ಮಾಡುವುದು ಒಳ್ಳೆಯದು.
ಆಂಟಿ ಏಜಿಂಗ್ ಗುಣಲಕ್ಷಣಗಳು
ತೆಂಗಿನ ಎಣ್ಣೆಯಲ್ಲಿ ಆಂಟಿ ಏಜಿಂಗ್ ಗುಣಲಕ್ಷಣಗಳಿವೆ. ಇದರಿಂದ ಚರ್ಮದ ಭಾಗದಲ್ಲಿ ಕೊಲಾಜೆನ್ ಅಂಶವನ್ನು ಉತ್ಪತ್ತಿ ಮಾಡಿ ನಿಮ್ಮ ಚರ್ಮದ ಮೇಲೆ ಸುಕ್ಕುಗಳು ಮೂಡಿ ಬರುವುದನ್ನು ತಪ್ಪಿಸುತ್ತದೆ.
PublicNext
16/01/2021 08:43 pm