ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್, ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ ಅಂಡರ್ ಆರ್ಮ್ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ ನಿಮಗೂ ಇದ್ದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಅಂಡರ್ ಆರ್ಮ್ ಳನ್ನು ಬೆಳ್ಳಗೆ ಮಾಡಿಕೊಳ್ಳುವ ಟಿಪ್ಸ್ ಇಲ್ಲಿದೆ.
ಇದಕ್ಕೆ ಬೇಕಾಗುವ ಪದಾರ್ಥ:
2 ಚಮಚ ಕಡಲೆಹಿಟ್ಟು, 1 ಚಮಚ ಮೊಸರು, 1 ಚಿಟಕಿ ಅರಿಶಿನ, ನಿಂಬೆ ರಸ 5 ಹನಿ, ಸ್ವಲ್ಪ ತೆಂಗಿನ ಎಣ್ಣೆ.
ಒಂದು ಪ್ಲೇಟ್ ಗೆ ಮೊಸರು, ಕಡಲೆ ಹಿಟ್ಟು, ನಿಂಬೆ ರಸ, ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಕಂಕುಳಿಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕಂಕುಳನ್ನು ತೊಳೆಯಿರಿ. ಕಂಕುಳನ್ನು ಮೃದು ಬಟ್ಟೆಯಿಂದ ಕ್ಲೀನ್ ಮಾಡಿ. ನಂತ್ರ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ರಾತ್ರಿ ಮಲಗುವ ಮುನ್ನ ಹೀಗೆ ಮಾಡಬೇಕು.
PublicNext
22/09/2020 10:09 pm