ನಮ್ಮ ಸುತ್ತ ಮುತ್ತಲೇ ಸಿಗುವ ನೈಸರ್ಗಿಕ ವಸ್ತುಗಳಿಂದ, ಕೂದಲಿನ ಆರೈಕೆಗೆ ಬೇಕಾಗುವ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಈ ಎಣ್ಣೆಯನ್ನು ನಿತ್ಯವೂ ಬಳಸುವುದರಿಂದ ಕೂದಲು ಸದೃಢವಾಗುವುದಲ್ಲದೇ, ಕೂದಲು ಮೃದುವಾಗಿ, ಉದ್ದವಾಗಿ ಬೆಳೆಯಲು ಸಹಾಯವಾಗುತ್ತದೆ. ಜೊತೆಗೆ ಹೊಟ್ಟು ನಿವಾರಣೆ, ಕೂದಲು ಉದುರುವಿಕೆಯೂ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.
ಬೇಕಾಗುವ ಸಾಮಗ್ರಿಗಳು:
ಶುದ್ಧ ಕೊಬ್ಬರಿ ಎಣ್ಣೆ, ದಾಸವಾಳ ಸೊಪ್ಪು, ಹೂವು, ಒಂದೆಲಗ, ಗರಿಕೆ ಜೆಡ್ಡು, ಭೃಂಗರಾಜ, ಲೋಳೇಸರ, ಪೇರಲೆ ಕುಡಿ, ನೆಲ್ಲಿಕಾಯಿ, ತುಳಸಿ, ಮೆಂತ್ಯ, ಹಾಲು, ಜೀರಿಗೆ, ಬಿಲ್ವಪತ್ರೆ, ಹೊನಗೆನೆ, ಕರಿಬೇವು
ತಯಾರಿಸುವ ವಿಧಾನ: ಮೇಲೆ ಹೇಳಿದ ವಸ್ತುಗಳನೆಲ್ಲಾ ನೀರು ಹಾಕಿ ರುಬ್ಬಿಕೊಳ್ಳಿ (ಕೊಬ್ಬರಿ ಎಣ್ಣೆ ಬಿಟ್ಟು), ನಂತರ ರುಬ್ಬಿದ ಮಿಶ್ರಣವನ್ನು ಸೋಸಿ, ಸೋಸಿದ ರಸವನ್ನು ಕುದಿಯಲು ಇಡಿ (ಒಂದು ಲೋಟದಷ್ಟು ಸೋಸಿದ ರಸವಿದ್ದರೆ, ಅದು ಕಾಲು ಲೋಟ ಆಗುವವರೆಕೆ ಕುದಿಸಬೇಕು), ನಂತರ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಕುದಿಸಿ. ನಂತರ ಇನ್ನೊಮ್ಮೆ ಸೋಸಿದರೆ ಹೇರ್ ಆಯಿಲ್ ಸಿದ್ಧ.
PublicNext
29/09/2020 01:08 pm