ಚಳಿಗಾಲದಲ್ಲಿ ಹೆಚ್ಚೆಚ್ಚು ಹಸಿವಾಗುತ್ತದೆ ಬಿಸಿ ಬಿಸಿಯಾದದ್ದನ್ನು ಆಗಾಗ್ಗೆ ತಿನ್ನಬೇಕು ಅನಿಸುವುದು ಸಾಮಾನ್ಯ.
ಹಾಗಾಗಿ ಕಡಿಮೆ ಸಮಯದಲ್ಲಿ ಮಾಡಿ ಬಿಸಿ ಮಜ್ಜಿಗೆ ಪಳದ್ಯ
ಬೇಕಾಗುವ ಸಾಮಗ್ರಿಗಳು: ಮೊಸರು – 2 ಲೋಟ, ಶುಂಠಿ – 1/2 ಇಂಚು, ಹಸಿಮೆಣಸು – 2, ಬೆಳ್ಳುಳ್ಳಿ – 8 ರಿಂದ 10 ಎಸಳು, ಉಪ್ಪು – ರುಚಿಗೆ ತಕ್ಕಷ್ಟು.
ಒಗ್ಗರಣೆಗೆ: ಉದ್ದಿನಬೇಳೆ, ಕರಿಬೇವು, ಸಾಸಿವೆ, ಎಣ್ಣೆ
ತಯಾರಿಸುವ ವಿಧಾನ: ಮೊಸರಿಗೆ ಹೆಚ್ಚು ನೀರು ಹಾಕದೆ ಮಜ್ಜಿಗೆ ಮಾಡಿಕೊಳ್ಳಿ. ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಿ. ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಸಿಡಿಸಿ.
ಅದಕ್ಕೆ ಜಜ್ಜಿದ ಶುಂಠಿ, ಬೆಳ್ಳುಳ್ಳಿ ಹಾಗೂ ಕತ್ತರಿಸಿದ ಹಸಿಮೆಣಸು ಹಾಕಿ ಬಾಡಿಸಿ.
ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಕುದಿಸಿ. ಸ್ಟೌ ಆರಿಸಿ ಒಗ್ಗರಣೆಗೆ ಮಜ್ಜಿಗೆ ಸೇರಿಸಿ. ಬೆಳ್ಳುಳ್ಳಿ ಬದಲು ಕಾಳುಮೆಣಸನ್ನು ಸೇರಿಸಬಹುದು.
ಈ ಮಜ್ಜಿಗೆ ಪಳದ್ಯ ಶೀತಕ್ಕೆ ಉತ್ತಮ ಮದ್ದು. ಅನ್ನಕ್ಕೂ ಕಲಿಸಿಕೊಂಡು ಸವಿಯಬಹುದು.
PublicNext
09/12/2020 01:22 pm