ಈಗಂತೂ ಮಾರುಕಟ್ಟೆಯಲ್ಲಿ ಸೀತಾಫಲ ಹಣ್ಣಿನದ್ದೇ ಕಾರುಬಾರು. ಆಯಾಯ ಋತುಮಾನಕ್ಕೆ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸೀತಾಫಲ ಹಣ್ಣುಗಳನ್ನು ಬಳಸಿ ಮಾಡುವ ಬಾಸುಂದಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
1 ಲೀಟರ್ - ಹಾಲು, 20 - ಕೇಸರಿ ದಳ, ¼ ಕಪ್ - ಸಕ್ಕರೆ, ¾ ಕಪ್ - ಸೀತಾಫಲ ತಿರುಳು (ಬೀಜ ತೆಗೆದದ್ದು)
ಮಾಡುವ ವಿಧಾನ:
ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಕುದಿಸಿ. ಇದು ಕುದಿಯಲು ಆರಂಭಿಸುತ್ತಿದ್ದಂತೆ ಇದಕ್ಕೆ ಕೇಸರಿದಳ ಸೇರಿಸಿ. 1 ಲೀಟರ್ ಹಾಲು ಅರ್ಧ ಲೀಟರ್ ಆಗುವವರೆಗೆ ಸಣ್ಣ ಉರಿಯಲ್ಲಿ ಕುದಿಸಿ. ಇದನ್ನು ಕೈಯಾಡಿಸುತ್ತಾ ಇರಿ. ಹಾಲು ಅರ್ಧಕ್ಕೆ ಬರುತ್ತಿದ್ದಂತೆ ಇದಕ್ಕೆ ಸಕ್ಕರೆ ಸೇರಿಸಿ 4 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ.
ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಇದು ತಣ್ಣಗಾದ ಮೇಲೆ ಸೀತಾಫಲದ ತಿರುಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಫ್ರಿಡ್ಜ್ ನಲ್ಲಿ 2 ಗಂಟೆಗಳ ಕಾಲ ಇಟ್ಟು ನಂತರ ಸರ್ವ್ ಮಾಡಿ.
PublicNext
25/09/2020 09:21 pm