ಕೊಪ್ಪಳ : ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೊನಿಗೆ ಚಿರತೆ ಬಿದ್ದಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಾಲಗತ್ತಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಸೆರೆಯಾಗಿದ್ದು,ಕಳೆದ ಹಲವು ದಿನಗಳಿಂದ ಮಾಲಗತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಚಿರತೆ ನಿದ್ದೆಗೆಡಿಸಿತ್ತು.
ಪ್ರತಿದಿನ ಜಾನುವಾರು ಭೇಟೆಯಾಡ್ತಿದ್ದ ಚಿರತೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿತ್ತು. ಅಲ್ಲದೆ ಚಿರತೆ ಓಡಾಟದಿಂದ ಜನ ಆತಂಕಗೊಂಡಿದ್ದರು. ಕೊನೆಗೂ ಇದೀಗ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
PublicNext
10/10/2022 11:17 am