ಕೋಲಾರ : ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್.ಎಸ್.ಎಸ್ ಪ್ರಶಿಕ್ಷಾ ವರ್ಗ ಆಯೋಜನೆ ಮಾಡಿದ್ದಾರೆ ಎಂದು ಆರೋಪಿಸಿ ಎಸ್.ಎಫ್.ಐ ಸೇರಿದಂತೆ ಕೆಲವು ಸಂಘಟನೆಗಳು ವಿರೋಧ ಮಾಡುತ್ತಿವೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕೂತಾಂಡ್ಲಹಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತರಬೇತಿ ಶಿಬಿರ ನಡೆಸಲು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಂದ ಅನುಮತಿ ನೀಡಲಾಗಿದ್ದು, ಅನುಮತಿ ಪತ್ರದಲ್ಲಿ ಎಲ್ಲೂ ಆರ್.ಎಸ್.ಎಸ್. ಎನ್ನುವ ಪದ ಬಳಸಿಲ್ಲ.ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಷಯ ಸೇವಾ ಪ್ರತಷ್ಠಾನದ ಹೆಸರಲ್ಲಿ ಅನುಮತಿ ನೀಡಲಾಗಿದ್ದು,ಯುವಕರಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಯೋಗಾಸನ, ರಾಷ್ಟ್ರ ಚಿಂತನೆ ಕುರಿತು ತರಬೇತಿ ನೀಡುವುದಾಗಿ ಉಲ್ಲೇಖ ಮಾಡಲಾಗಿದೆ.
ವರದಿ : ರವಿ ಕುಮಾರ್, ಕೋಲಾರ.
PublicNext
11/10/2022 11:15 am