ಕೋಲಾರ: ಕೋಲಾರ ನಗರದ ಅಂತರಗಂಗೆ ಕಾಶಿ ವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ಅದ್ದೂರಿಯಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದಕ್ಷಿಣ ಕಾಶಿಯ ಅಂತರಗಂಗೆ ಬೆಟ್ಟದ ದಾರಿಯುದ್ದಕ್ಕೂ ಹಣತೆಗಳ ಸಾಲು ಶ್ರದ್ಧಾ ಭಕ್ತಿಯ ಪ್ರತೀಕವಾಗಿ ಕಂಡು ಬಂತು. ಅಂತರಗಂಗೆಯಲ್ಲಿ 18 ವರ್ಷಗಳಿಂದಲೂ ಶಿವ ಲಕ್ಷ ದೀಪೋತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ತೆಪ್ಪೋತ್ಸವದ ಜೊತೆಗೆ ವಿಶಾಲಾಕ್ಷಿ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವವನ್ನು ಸಹ ಏರ್ಪಡಿಸಲಾಗಿತ್ತು. ಜನರು ಭಕ್ತಿಸಾಗರದಲ್ಲಿ ಮುಳುಗಿದ್ದರು. ಕೊರೆಯುವ ಚಳಿಯ ನಡುವೆಯೂ ಅಂತರಂಗೆಯ ಕ್ಷೇತ್ರವನ್ನು ಸಾವಿರಾರು ಭಕ್ತರು ಒಂದು ಸಾವಿರ ಕೆ.ಜಿ ಎಣ್ಣೆ ಹಾಕಿ ಹಣತೆ ಬೆಳಗಿಸಿದರು. ವಿಶೇಷ ಹೂವಿನ ಅಲಂಕಾರವನ್ನು ನಡೆಸಿದ್ದು, ಕಲ್ಲು ಬಸವನ ಬಾಯಿಂದ ಸದಾ ನೀರು ಜಿನುಗುವ ಅಂತರಂಗೆ ದೇವಾಲಯದ ಕಲ್ಯಾಣಿಯಲ್ಲಿ ತೆಪೋತ್ಸವವನ್ನು ವೀಕ್ಷಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಕಾಶಿ ವಿಶ್ವೇಶ್ವರಸ್ವಾಮಿಗೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು.
Kshetra Samachara
15/12/2024 12:44 pm