ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸ್ಕಂದ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ

ಕೋಲಾರ : ಕೋಲಾರ ನಗರದ ಕೋಟೆಯಲ್ಲಿ ನೆಲೆಗೊಂಡಿರುವ ಶ್ರೀ ಮಹಾಲಕ್ಷ್ಮಿ ಸಂಕಷ್ಟಹರ ಗಣಪತಿ ಹಾಗೂ ಶ್ರೀ ವಲ್ಲೆ, ದೇವಸೇನಾ ಸಮೇತ ಷಣ್ಮುಗ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಮಾರ್ಗಶಿರ ಮಾಸದ ಸ್ಕಂದ ಷಷ್ಠಿ ಅಂಗವಾಗಿ ಸುಬ್ರಹ್ಮಣ್ಯ ಸ್ವಾಮಿಗೆ ಆದಿಶೇಷ ವಾಹನ ಸ್ಕಂದ ಅಲಂಕಾರ ಮತ್ತು ವಿಶೇಷ ಪೂಜಾ ಕಾರ್ಯವನ್ನು ಏರ್ಪಡಿಸಲಾಗಿತ್ತು. ದೇವಾಲಯವನ್ನು ತಳ್ಳಿರು ತೋರಣ ಹಾಗೂ ವಿದ್ಯುತ್ ದೀಪ ಅಲಂಕಾರಗಳಿಂದ ಅಲಂಕರಿಸಿ, ಬೆಳಿಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ,ಸಹಸ್ರ ನಾಮಾರ್ಚನೆ. ನೂರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಹರಕೆ ಒತ್ತ ಭಕ್ತಾದಿಗಳು ಕಾವಡಿ ಸೇವೆ ಪೂಜೆಯನ್ನು ಸಹ ಸಮರ್ಪಿಸಿದರು. ಎಲ್ಲ ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ಸೋಮಶೇಖರ್ ದೀಕ್ಷಿತ್ , ವಿನಯ್ ದೀಕ್ಷಿತ್ ನೆರವೇರಿಸಿಕೊಟ್ಟರು.

Edited By : PublicNext Desk
PublicNext

PublicNext

08/12/2024 08:15 am

Cinque Terre

16.25 K

Cinque Terre

0