ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಬಂಗಾರಪೇಟೆ ಶಾಸಕರಿಂದಲೇ ಜೀವ‌ ಬೆದರಿಕೆ: ಕೆಜಿಎಫ್ ಎಸ್​​ಪಿಗೆ ದೂರು

ಕೋಲಾರ: ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಸಮಾಜ ಸೇವಕ ಶ್ರೀಧರ್ ಎಂಬುವರಿಗೆ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬೆಂಬಲಿಗರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ಕೆಜಿಎಫ್ ಎಸ್‌ಪಿ ಧರಣಿ ದೇವಿ ಅವರಿಗೆ ದೂರು ನೀಡಲಾಗಿದೆ.

ಬಂಗಾರಪೇಟೆ ಪಟ್ಟಣದ ಸರ್ವೇ ನಂ 137ರ ಒಬ್ಬಟ್ಟು ಕೆರೆಯಲ್ಲಿ ಅಕ್ರಮವಾಗಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಘೋಷಿಸಿದ್ದರು. ಆದರೆ ಕರೆಯ ಅಂಗಳದಲ್ಲಿ ಸುಮಾರು 3 ಎಕರೆ ಜಮೀನು ಒತ್ತುವರಿಯಾಗಿದ್ದು, ಇದರಲ್ಲಿ ತೋಟಗಾರಿಕೆ ಇಲಾಖೆ, ಕನ್ನಡ ಭವನ, ವಿದ್ಯಾರ್ಥಿ ನಿಲಯ ಮತ್ತು ಪ್ರಾಥಮಿಕ ಶಾಲೆಯನ್ನು ಕಟ್ಟಲಾಗಿದೆ.‌ ಇದರ ಜೊತೆಗೆ ಈಗ ಶಾಸಕ ನಾರಾಯಣಸ್ವಾಮಿ ಅಂಬೇಡ್ಕರ್ ‌ಭವನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ‌ ಬಗ್ಗೆ ಸಮಾಜ ಸೇವಕ ಶ್ರೀಧರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಧ್ಯಂತರ ತಡೆಯಾಜ್ಞೆ ತರಲಾಗಿತ್ತು.

ಇನ್ನು ಅನಧಿಕೃತವಾಗಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಅಲ್ಲಿನ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸಹ ಸೂಚನೆ ನೀಡಿತ್ತು.ಇದರಿಂದ ಆಕ್ರೋಶಗೊಂಡಿರುವ ಶಾಸಕರ ಬೆಂಬಲಿಗರಾದ ಸೂಲಿಕುಂಟೆ‌ ರಮೇಶ, ಹುಣಸಹಳ್ಳಿ ವೆಂಕಟೇಶ, ಮಣಿವಣ್ಣನ್,‌ ಚಿಕ್ಕನಾರಾಯಣ ತಮ್ಮ ಮನೆಯ ಮುಂದೆ ಧರಣಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಎಸ್ಪಿ ಅವರಿಗೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

10/10/2022 11:01 am

Cinque Terre

19.53 K

Cinque Terre

0

ಸಂಬಂಧಿತ ಸುದ್ದಿ