ಕೋಲಾರ : ಜಿಲ್ಲೆಯಾದ್ಯಂತ ನೆನ್ನೆಯಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನರು ಹೈರಾಣಾಗಿದ್ದಾರೆ. ಕಳೆದ ವಾರ ಸುರಿದ ಮಳೆಯಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ರೈತರಿಗೆ ಮಳೆ ಎದುರಾಗಿದ್ದು ಜಿಟಿ ಜಿಟಿ ಮಳೆಯಾಗುತ್ತಿದೆ. ರಾಗಿ ಬೆಳೆಯು ಕಟಾವಿಗೆ ಬಂದಿದ್ದು, ಸಮೃದ್ದವಾಗಿ ಬೆಳೆದು ನಿಂತಿದ್ದ ರಾಗಿ ಬೆಳೆ ಕಟಾವು ಮಾಡಲು ಮಳೆ ಅಡ್ಡಿಯುಂಟು ಮಾಡಿದೆ. ಕೊಯ್ಲಿಗೆ ಬಂದಿರುವ ರಾಗಿ ತೆನೆಯೂ ಮಳೆಗೆ ನೆಲಕಚ್ಚಿದೆ. ಕೂಡಲೇ ಬಿಸಿಲು ಬಾರದಿದ್ದರೆ ತೆನೆಯಲ್ಲೆ ಮೊಳಕೆ ಹೊಡೆದು ರಾಗಿ ತೆನೆ ಹಾನಿಯಾಗುತ್ತದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
PublicNext
13/12/2024 04:16 pm