ಕೋಲಾರ : ಕೋಲಾರ ಮಾಜಿ ಶಾಸಕ ಹಾಲಿ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ ಆಶ್ಚರ್ಯ ಮೂಡಿಸಿದ್ದಾರೆ. ಈ ಹಿಂದೆ 101 ಸೀಟು ಬಿಜೆಪಿ ಇತ್ತು, 6 ಸೀಟು ಪಕ್ಷೇತರ ಗೆದ್ದಿದ್ದಾಗಲೂ ಯಡಿಯೂರಪ್ಪನೇ ಸಿಎಂ ಆಗೋದು, ಆದ್ರೂ ನಾನು ಹೇಳಿದ್ದು ಸಿದ್ದರಾಮಯ್ಯನೇ ಸಿಎಂ ಆಗಬೇಕು ಅಂತಾ ಅದು ನನ್ನ ವೈಯಕ್ತಿಕ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕೋಲಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನಕ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಬೇಸರವಾಗಿದೆ ಸಿದ್ದರಾಮಯ್ಯ ಪರ ಆರೋಪ ಮಾಡಿದ್ದು ಬೇಜಾರಿಲ್ಲ ಆದ್ರೆ ಸಿದ್ದರಾಮಯ್ಯ ಅವರ ಧರ್ಮಪತ್ನಿ, ನಮ್ಮ ತಾಯಿ ಮೇಲೆ ಕೇಸ್ ಹಾಕಿದು ನನಗೆ ತುಂಬಾ ಕೋಪ ಬಂದಿದೆ ಎಂದ್ರು. ಅವರು ಮಾಡಬಾರದೇನು ಮಾಡಿಲ್ಲ, ಇದು ಕಲಿಯುಗ ಧರ್ಮದ ಯುದ್ದ ನಡೆಯುತ್ತಿದೆ, ಧರ್ಮಯುದ್ದದಲ್ಲಿ ಸಿದ್ದರಾಮಯ್ಯ ಗೆಲುತ್ತಾರೆ ಎಂದರಲ್ಲದೆ ಹಾಗಂತ ನಾನು ಕಾಂಗ್ರೆಸ್ಗೆ ಹೋಗುವುದಿಲ್ಲ ನಾನು ಜಾತಿ ಪ್ರೇಮಿ ಅಷ್ಟೇನೇ ಎಂದ್ರು.
ಇನ್ನೂ ಲೋಕಾಯುಕ್ತ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಕೊಡುತ್ತೆ ಐದು ವರ್ಷ ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಾರೆ 7 ಕೋಟಿ ಜನರ ಮತ್ತು ಹಿಂದುಳಿದ ವರ್ಗಗಳ ಪ್ರೀತಿ ಸಿದ್ದರಾಮಯ್ಯ ಅವರ ಮೇಲಿದೆ ಎಂದು ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿ ತೋರಿಸಿದ್ರು. ವಿತ್ಔಟ್ ಸಿದ್ದರಾಮಯ್ಯ ದೇರ್ ಈಸ್ ನೋ ಕಾಂಗ್ರೆಸ್ ಎನ್ನುವ ಮೂಲಕ ಹಳೆಯ ಗುರುವನ್ನ ಸಮರ್ಥನೆ ಮಾಡಿಕೊಂಡ್ರು. ಅಲ್ಲದೆ ರಾಜ್ಯದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಸಿಎಂ ಆಗಬೇಕು ಸಿದ್ದರಾಮಯ್ಯ ಮೇಲೆ ಬಂದಿರುವ ಆರೋಪ ಸುಳ್ಳು ನಾವೆಲ್ಲಾ ಹೋರಾಟ ಮಾಡಬೇಕು, ಆದ್ರೆ ನಾನು ಬಿಜೆಪಿಯಲ್ಲಿದ್ದೇನೆ ಮಾಡಕ್ಕೆ ಆಗಲ್ಲ ಎಂದು ಹೇಳಿದ್ರು. ಇನ್ನೂ ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಮೂರು ಲಕ್ಷ ಮತವಿದೆ, ಕುರುಬರು ತುಂಬಾ ಹುಷಾರ್ ಆಗಿದ್ದಾರೆ ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ರು.
Kshetra Samachara
18/11/2024 04:16 pm