ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀನಿವಾಸಪುರ: ಆನಂದಾಶ್ರಮ ವಿಶೇಷಚೇತನರಿಗೆ ವೃತ್ತಿ ಕೌಶಲ್ಯ ತರಬೇತಿ- ಕೋಲಿಸ್ಟ್ ಏರೋಸ್ಪೇಸ್ ಸೇವಾ ಕೈಂಕರ್ಯ

ಶ್ರೀನಿವಾಸಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಕೊಠಡಿಗಳು, ವಿಜ್ಞಾನ ಲ್ಯಾಬ್ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೋಲಿಸ್ಟ್ ಏರೋಸ್ಪೇಸ್ ಕಂಪೆನಿ ಸ್ವಯಂಸೇವಕ ನರಸಿಂಹ ಮೂರ್ತಿ ಹೇಳಿದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಗ್ರಾಮದ ಆನಂದ ಆಶ್ರಮದಲ್ಲಿ ಬೆಂಗಳೂರಿನ ಕೋಲಿಸ್ಟ್ ಏರೋಸ್ಪೇಸ್ ಕಂಪೆನಿ ವತಿಯಿಂದ ಆಶ್ರಮದ ವಿಶೇಷಚೇತನರಿಗೆ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಕಳೆದ ಹತ್ತು ವರ್ಷಗಳಿಂದ ಈ ಆಶ್ರಮದೊಂದಿಗೆ ಕೈಜೋಡಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಹತ್ತು ವರ್ಷಗಳ ಹಿಂದೆ ಆಶ್ರಮಕ್ಕೆ ಭೇಟಿ ಕೊಟ್ಟಾಗ ಮಕ್ಕಳು ಅಂಗವೈಕಲ್ಯ ಹೊಂದಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಥೆರಪಿಯ ಮೂಲಕ ಆರೋಗ್ಯದ ಜಾಗೃತಿ ಮೂಡಿಸಲಾಗಿತ್ತು. ವಿದ್ಯಾರ್ಥಿಗಳನ್ನು ಗ್ರಾಮಗಳಿಂದ ಶಾಲೆಗೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಾಗಿ ಶಾಲೆಗೆ ಬೇಕಾದ ಇತರ ಮೂಲ ಸೌಲಭ್ಯ ಕಲ್ಪಿಸಲಾಗಿದೆ.

ನಮ್ಮ ಕಂಪೆನಿ ವತಿಯಿಂದ ಪ್ರತಿ ವರ್ಷ ಶಿಕ್ಷಣ, ಪರಿಸರ, ಕೃಷಿ ಹೀಗೆ ಹಲವಾರು ಪ್ರಾಜೆಕ್ಟ್ ಮಾಡುತ್ತಿದ್ದೇವೆ. ಮೂರು ತಿಂಗಳು ತರಬೇತಿ ಪಡೆದು ನಿಮ್ಮದೇ ಆದ ರೀತಿಯಲ್ಲಿ ಜೀವನ ಸಾಗಿಸಬಹುದು. ನಮ್ಮಲ್ಲಿ ತರಬೇತಿ ಪಡೆದವರು ನಮ್ಮ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುವಂತೆ ಸಲಹೆ ನೀಡಿದರು. ನಿಮ್ಮೊಂದಿಗೆ ಆನಂದ ಆಶ್ರಮ ಇದೆ. ಅವರೊಂದಿಗೆ ನಾವು ಸಹ ಇರುತ್ತೇವೆ ಎಂದು ತಿಳಿಸಿದರು.

Edited By : Vinayak Patil
PublicNext

PublicNext

05/10/2024 08:08 pm

Cinque Terre

26.45 K

Cinque Terre

0