ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ನಿವೇಶನ, ಹಕ್ಕುಪತ್ರ, ಮೂಲಭೂತ ಸೌಲಭ್ಯ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕೊಡಗು: ನಿವೇಶನ ರಹಿತರಿಗೆ ನಿವೇಶನ, ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಂತೆ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದಿಂದ ಪೊನ್ನಂಪೇಟೆ ತಾಲೂಕಿನ ಹೈಸೊಡ್ಲೂರು ಕಾಲೋನಿಯಿಂದ ತಾಲೂಕು ಕಚೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥ ನಡೆಯಿತು.

ಹೈಸೊಡ್ಲೂರು ಗ್ರಾಮದಲ್ಲಿ ದಲಿತ ಸಮುದಾಯಕ್ಕೆಂದು ಗುರುತಿಸಲಾದ ಎಂಟು ಏಕರೆ ಜಾಗದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ನಿವೇಶನರಹಿತರಿಗೆ ನಿವೇಶನ ಒದಗಿಸುವಮತೆ ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಂತೆ ಜಾಥದಲ್ಲಿ ಪಾಲ್ಗೊಂಡಿದ್ದವರು ಘೋಷಣೆಗಳ ಮೂಲಕ ಸರಕಾರವನ್ನು ಒತ್ತಾಯಿಸಿದರು. ಹೈಸೊಡ್ಲೂರು ಕಾಲೋನಿಯಿಂದ ಆರಂಭಗೊಂಡ ಜಾಥ ಹುದಿಕೇರಿ, ಪೊನ್ನಂಪೇಟೆಯ ಮುಖ್ಯರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಬಳಿ ಸಮಾಪನಗೊಂಡಿತು. ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಪಾಂಡುರಂಗಸ್ವಾಮಿ ಅವರು ಮಾತನಾಡಿ, ಕಳೆದ ಎಂಟು ವರ್ಷಗಳಿಂದ 8 ಎಕರೆ ಜಾಗವನ್ನು ಹೈಸೊಡ್ಲೂರು ದಲಿತ ಸಮುದಾಯಕ್ಕೆಂದು ಗುರುತಿಸಲ್ಪಟ್ಟಿದ್ದರೂ ಕೂಡ ಇದುವರೆವಿಗೂ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಎಂಟು ಏಕರೆ ಜಾಗ ಒತ್ತುವರಿಯಾಗಿದ್ದು, ಇಲ್ಲಿನ ದಲಿತ ಸಮುದಾಯದವರಿಗೆ ನಿವೇಶನ ಒದಗಿಸದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Ashok M
PublicNext

PublicNext

10/12/2024 06:35 pm

Cinque Terre

29.6 K

Cinque Terre

0

ಸಂಬಂಧಿತ ಸುದ್ದಿ