ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಮಾಯಮುಡಿ ಗ್ರಾ.ಪಂ ಯಿಂದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ

ಕೊಡಗು: ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿ ವತಿಯಿಂದ ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶುದ್ಧ ನೀರಿನ ಘಟಕ ಮತ್ತು ಡಿಸ್ಪೆನ್ಸರ್ ಹಾಗೂ 11 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ನೀರಿನ ಘಟಕ ವನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಮಾಯಾಮುಡಿ ಗ್ರಾ.ಪಂ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಅವರು, ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ನೀಡುವ ಉದ್ದೇಶದಿಂದ ಬಿಸಿ ಹಾಗೂ ತಣ್ಣೀರಿನ ವಾಟರ್ ಫಿಲ್ಟರ್‌ನ್ನು ನೀಡಲಾಗಿದೆ ಎಂದರು. ಆರೋಗ್ಯವಂತ ಸಮಾಜ ನಿರ್ಮಿಸುವ ಗುರಿಯನ್ನು ಗ್ರಾ.ಪಂ. ಹೊಂದಿದೆ. ಸ್ವಚ್ಛ ಪರಿಸರ, ಶುದ್ಧಗಾಳಿ, ನೀರು ಎಲ್ಲರಿಗೂ ಅತ್ಯವಶ್ಯಕ. ಶುದ್ಧಗಾಳಿ ಮತ್ತು ಶುದ್ಧ ನೀರಿನಿಂದ ಶೇ.80ರಷ್ಟು ವಿವಿಧ ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.

Edited By : Abhishek Kamoji
Kshetra Samachara

Kshetra Samachara

11/12/2024 08:45 pm

Cinque Terre

180

Cinque Terre

0

ಸಂಬಂಧಿತ ಸುದ್ದಿ