ಕೊಡಗು: ಕೃಷಿಕರು ಬೆಳೆದ ಬಗೆಗೆಯ ಹಣ್ಣಿನ ಪ್ರದರ್ಶನ ಹಾಗು ವೈವಿದ್ಯತಾ ಮೇಳವು ಕೊಡಗು ಜಿಲ್ಲೆ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದಿದ್ದು ಎಲ್ಲರ ಗಮನ ಸೆಳೆಯಿತು.
ರೈತರು ಬೆಳೆದ ಸ್ಥಳೀಯ ಹಣ್ಣುಗಳಾದ ಕೊಡಗಿನ ಕಿತ್ತಳೆ, ರಸಬಾಳೆ, ಪಚ್ವೆಬಾಳೆ, ಚಂದ್ರಬಾಳೆ, ಜೊತೆಗೆ ವಿದೇಶಿ ಹಣ್ಣುಗಳಾದ ರಾಂಬೂಟಾನ್, ಮ್ಯಾಂಗೊಸ್ಟೀನ್, ಫಿಂಗರ್ ಬನಾನ, ಮೆಕಡೋಮಿಯ, ರ್ಡ್ರಾಗನ್ ಫ್ರೂಟ್, ಹಣ್ಣುಗಳು ಪ್ರದರ್ಶನ ಗೊಂಡವು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರೈತರ ಹಕ್ಕುಗಳ ಕಾಯ್ದೆಯ ಅಧ್ಯಕ್ಷರಾದ ಡಾ.ಟ್ರಿಲೋಚನ್ ಮೊಹಪತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
PublicNext
22/10/2024 10:29 am