ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಕಾಫಿ ತೋಟದಲ್ಲಿ ಗಾಂಜಾ ಬೆಳೆ- ವಿಶೇಷ ತಂಡ ದಾಳಿ, ಆರೋಪಿ ಬಂಧನ

ಕೊಡಗು: ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಮನೆಯೊಂದರ ಬಳಿ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎಮ್ಮೆಮಾಡು ಗ್ರಾಮದ ಕನ್ನಡಿಯಂಡ ಮಹಮ್ಮದ್ ಕೆ.ಎಂ.(43) ಬಂಧಿತ ಆರೋಪಿಯಾಗಿದ್ದು, ತೋಟದಲ್ಲಿ ಬೆಳೆಯಲಾಗಿದ್ದ 35 ಕೆ.ಜಿ. 675 ಗ್ರಾಂ ಹಸಿ ಗಾಂಜಾ ಮತ್ತು 275 ಗ್ರಾಂ ಒಣ ಗಾಂಜಾವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನಿರ್ದೇಶನದಂತೆ ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪ ಅವರ ನೇತೃತ್ವದ ವಿಶೇಷ ತಂಡ ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Edited By : Ashok M
PublicNext

PublicNext

21/10/2024 07:02 pm

Cinque Terre

19.44 K

Cinque Terre

0

ಸಂಬಂಧಿತ ಸುದ್ದಿ