ಉಜ್ಬೇಕಿಸ್ತಾನ್: ಉಜ್ಬೇಕಿಸ್ತಾನ್‌ನಲ್ಲಿ ನಡೆಯುತ್ತಿರುವ ಪ್ರಾದೇಶಿಕ ಶೃಂಗಸಭೆಯಲ್ಲಿ ಇಯರ್ ಫೋನ್ ಹಾಕಿಕೊಳ್ಳಲು ಸಿಕ್ಕಾಪಟ್ಟೆ ಪರದಾಡಿದ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ.
ಇಯರ್ ಫೋನ್ ಹಾಕಿಕೊಳ್ಳಲು ಸಾಧ್ಯವಾಗದೇ ಕೆಲವು ನಿಮಿಷ ಪರದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಈ ದೃಶ್ಯ ನೋಡಿ ಕಿರುನಗೆ ಬೀರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪುತಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಇಯರ್‌ಫೋನ್ ಹಾಕಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಟ್ರಾನ್ಸ್‌ಲೇಟರ್ ಟೂಲ್ ಇರುವ ಇಯರ್‌ಫೋನ್ ಇದಾಗಿದ್ದು, ಮುಖಂಡರು ಭಾಷಣ ಮಾಡುವಾಗ ಹಿಂದಿಯಲ್ಲಿ ಭಾಷಾಂತರ ಮಾಡಿ ಅದನ್ನು ಇದರ ಮೂಲಕ ಕೇಳಿಸಲಾಗುತ್ತದೆ.
ಆದರೆ ಅದನ್ನು ಹಾಕಿಕೊಳ್ಳಲು ಪಾಕ್ ಪ್ರಧಾನಿ ಪರದಾಡಿದರು. ಕೊನೆಗೆ ಸಾಧ್ಯವಾಗದೇ ಹೋದಾಗ ಯಾರಾದರೂ ಪ್ಲಿಸ್ ನನಗೆ ಸಹಾಯ ಮಾಡಿ ಎಂದು ಪಾಕ್ ಪ್ರಧಾನಿ ಕೋರಿಕೊಂಡಿದ್ದಾರೆ. ನಂತರ ಸಭಾಂಗಣದಲ್ಲಿದ್ದ ಅಧಿಕಾರಿಗಳು ತಮ್ಮ ಇಯರ್‌ಫೋನ್‌ಗಳನ್ನು ಸರಿಯಾಗಿ ಕಿವಿಗೆ ಹಾಕಿದರು. ಆದರೆ ಇಲ್ಲಿದೆ ಮುಗಿಯಲಿಲ್ಲ. ಪುತಿನ್ ಮಾತು ಆರಂಭಿಸಿದ ಕೂಡಲೇ ಮತ್ತೊಮ್ಮೆ ಷರೀಫ್ ಅವರ ಇಯರ್ ಫೋನ್ ಕೆಳಗೆ ಬಿದ್ದು ಹೋಗಿದೆ. ಎರಡನೇ ಬಾರಿ ಮತ್ತೆ ಅಧಿಕಾರಿಗಳು ಬಂದು ಇಯರ್‌ಫೋನ್ ಮತ್ತೆ ಸರಿಪಡಿಸಿದರು.
ಈಗಾಗಲೇ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಈ ವಿಡಿಯೋದಿಂದ ಮತ್ತಷ್ಟು ನಗೆಪಾಟಲಿಗೀಡಾಗಿದೆ. ಈ ವಿಡಿಯೋವನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಕೂಡ ಹಂಚಿಕೊಂಡಿದ್ದು ವ್ಯಂಗ್ಯವಾಡಿದೆ
PublicNext
16/09/2022 05:28 pm