ಅಮೆರಿಕಾ: ಸುದ್ದಿ ನಿರೂಪಕಿಯೊಬ್ಬರು ನೇರ ಪ್ರಸಾರದಲ್ಲಿ ಸ್ಟ್ರೋಕ್ ಎಚ್ಚರಿಕೆ ಚಿಹ್ನೆಗಳ ಬಗ್ಗೆ ವೀಕ್ಷಕರಿಗೆ ಸುದ್ದಿ ವರದಿಯನ್ನು ಓದುವಾಗ ಏಕಾಏಕಿ ಸ್ಟ್ರೋಕ್‌ನ ನೋವು ಅನುಭವಿಸಿದ್ದಾಳೆ. ಬಳಿಕ ಮಾತುಗಳನ್ನು ಮಧ್ಯದಲ್ಲಿ ನಿಲ್ಲಿಸುತ್ತಿರುವುದನ್ನು ಕಾಣಬಹುದು. ಜೂಲಿ ಚಿನ್ ಎಂಬಾಕೆ ನಿರೂಪಕಿ ಈ ರೀತಿ ಸ್ಟ್ರೋಕ್‌ನ ಮೊದಲ ಅನುಭವವಾಗಿದೆ.
ಬಳಿಕ ಆನ್ ಏರ್‌ನಲ್ಲೆ ನನ್ನನ್ನು ಕ್ಷಮಿಸಿ, ಇಂದು ಬೆಳಿಗ್ಗೆ ನನಗೆ ಏನೋ ಆಗುತ್ತಿದೆ. ಹಾಗಾಗಿ ತಪ್ಪು ಆಗುತ್ತಿದೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಎನ್‌ಬಿಸಿ ಯುನಿವರ್ಸಲ್‌ನ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೈರಲ್ ವೀಡಿಯೊದಲ್ಲಿ, ಚಿನ್ ತೊದಲುವಿಕೆ ಮತ್ತು ಟೆಲಿಪ್ರಾಂಪ್ಟರ್‌ನಿಂದ ತನ್ನ ಸಾಲುಗಳನ್ನು ಓದಲು ತಡವಡಿಸಿದ್ದಾರೆ ಎಂದು ಹೇಳಿದರು.
ಅವರು ಈಗ ಚೆನ್ನಾಗಿದ್ದಾರೆ, ಆದರೆ ಸ್ಟ್ರೋಕ್ ಎಚ್ಚರಿಕೆ ಚಿಹ್ನೆಗಳ ಬಗ್ಗೆ ವೀಕ್ಷಕರಿಗೆ ತಿಳಿಸಲು ತನ್ನ ಅನುಭವವನ್ನು ಹಂಚಿಕೊಳ್ಳಲು ಬಯಸಿದ್ದರು ಎಂದು ಅವರು ಬರೆದಿದ್ದಾರೆ.
PublicNext
07/09/2022 05:32 pm