ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಶ್ವೇತ ಭವನದಲ್ಲೂ ದೀಪಾವಳಿ ಹವಾ: ಹಬ್ಬ ಆಚರಿಸಿದ ಜೋ ಬೈಡನ್ ದಂಪತಿ

ವಾಷಿಂಗ್ಟನ್‌: ದೀಪಾವಳಿ ಸಂಭ್ರಮ ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ. ಜಗತ್ತಿನ ಹಲವು ರಾಷ್ಟ್ರಗಳ ಜನರು ದೀಪಾವಳಿ ಆಚರಿಸಿ ಪರಸ್ಪರ ಶುಭಾಶಯ ಹಂಚಿಕೊಳ್ಳುತ್ತಾರೆ. ವಿಶೇಷವೆಂದರೆ ಈ ಸಲ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೂಡ ದೀಪಾವಳಿ ಆಚರಿಸಿದ್ದಾರೆ. ಇದಕ್ಕೆ ಪತ್ನಿ ಜಿಲ್ ಬಿಡೆನ್ ಅವರೊಂದಿಗೆ ದೀಪ ಬೆಳಗಿಸಿದ ಅವರು ಜನತೆಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ.

ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು ಅಮೆರಿಕ ಹಾಗೂ ವಿಶ್ವದಾದ್ಯಂತ ದೀಪಾವಳಿಯನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದಾರೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

"ದೀಪಾವಳಿಯಲ್ಲಿ ದೀಪ ಹಚ್ಚುವುದು ಕತ್ತಲಿನಿಂದ ಜ್ಞಾನ, ಅರಿವು, ಸತ್ಯದ ಬೆಳಕಿನ ಕಡೆಗೆ ಸಾಗುವ ಸಂಕೇತವಾಗಿದೆ. ವಿಭಜನೆಯಿಂದ ಏಕತೆ, ಹತಾಶೆಯಿಂದ ಭರವಸೆಯೆಡೆಗಿನ ತುಡಿತವಾಗಿದೆ” ಎಂದು ಬೈಡೆನ್‌ ಟ್ವೀಟ್‌ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

05/11/2021 03:11 pm

Cinque Terre

32.28 K

Cinque Terre

3