ಮೆಕ್ಸಿಕೋ: ಉಸಿರಾಡಲು ಗಾಳಿ ಸಿಗದೇ ಟ್ರಕ್ ವೊಂದರಲ್ಲಿ ಬರೋಬ್ಬರಿ 46 ವಲಸೆ ಕಾರ್ಮಿಕರು ಸಾವನ್ನಪ್ಪಿದ ಘಟನೆ ಅಮೆರಿಕದ ಟೆಕ್ಸಾಸ್ ನಲ್ಲಿರುವ ಸ್ಯಾನ್ ಆಂಟೋನಿಯೋ ನಗರದಲ್ಲಿ ನಡೆದಿದೆ. ಸದ್ಯ ಮಾನವ ಕಳ್ಳಸಾಗಾಟದ ವೇಳೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಯುಎಸ್-ಮೆಕ್ಸಿಕೋ ಗಡಿಯಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣೆಯ ಇತ್ತೀಚಿನ ಅತ್ಯಂತ ಭಯಾನಕ ಘಟನೆ ಇದು ಎಂದು ಸ್ಯಾನ್ ಆಂಟೋನಿಯೋ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಕ್ ಟ್ರೈಲರ್ ನಲ್ಲಿ ಕಂಡುಬಂದ ನಾಲ್ವರು ಅಪ್ರಾಪ್ತರು ಸೇರಿದಂತೆ 46 ಜನರನ್ನು ಶಾಖದ ಹೊಡೆತ ಮತ್ತು ಬಳಲಿಕೆ ಕಾರಣದಿಂದ ಒಂದೇ ಟ್ರಕ್ ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಘಟನೆಯ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದಹಾಗೆ ಟ್ರೈಲರ್ ಟ್ರಕ್, ಸ್ಯಾನ್ ಆಂಟೋನಿಯೋದ ದಕ್ಷಿಣ ಹೊರವಲಯದ ನಿರ್ಜನ ಪ್ರದೇಶದಲ್ಲಿರುವ ರೈಲ್ವೆ ಹಳಿಗಳ ಪಕ್ಕದಲ್ಲಿ ಪತ್ತೆಯಾಗಿದೆ.
ಟ್ರಕ್ ಒಳಗೆ ಉಸಿರುಗಟ್ಟಿ ವಲಸೆ ಕಾರ್ಮಿಕರು ಮೃತಪಟ್ಟಿರಬಹುದೆಂದು ಮೆಕ್ಸಿಕೋದ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಅವರು ತಿಳಿಸಿದ್ದಾರೆ.
PublicNext
28/06/2022 04:21 pm