ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಪಾಳದಲ್ಲಿ ವಿಮಾನ ಪತನ : ಪ್ರಯಾಣಿಕರೆಲ್ಲರೂ ಮೃತ್ಯು!

ಕಠ್ಮಂಡು: ಖಾಸಗಿ ಏರ್ ಲೈನ್ಸ್ ಗೆ ಸೇರಿದ್ದ ನೇಪಾಳ ವಿಮಾನ ನಾಪತ್ತೆಯಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸದ್ಯ ನಾಪತ್ತೆಯಾದ ವಿಮಾನ ಪತನಗೊಂಡಿದ್ದು ವಿಮಾನದಲ್ಲಿದ್ದವರೆಲ್ಲರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಸ್ಥಳದಲ್ಲಿ ಇದುವರೆಗೂ 16 ಮೃತದೇಹ ಪತ್ತೆಯಾಗಿದ್ದು, ಉಳಿದ 6 ಶವಗಳಿಗಾಗಿ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಮುಸ್ತಾಂಗ್ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಷೆ ನದಿಯ ಸಮೀಪ 14,500 ಅಡಿ ಎತ್ತರದಲ್ಲಿ ಪರ್ವತದ ತುದಿಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ.

ನೇಪಾಳದ ಗೃಹ ಸಚಿವಾಲಯದ ವಕ್ತಾರ ಫಡಿಂದ್ರ ಮಣಿ ಪೋಖ್ರೆಲ್ ಮಾತನಾಡಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿಯಲು ಸಾಧ್ಯವಿಲ್ಲ. ಆದರೆ ಅಧಿಕೃತ ಹೇಳಿಕೆ ಬರಬೇಕಿದೆ ಎಂದು ತಿಳಿಸಿದರು.

Edited By : Nirmala Aralikatti
PublicNext

PublicNext

30/05/2022 04:33 pm

Cinque Terre

64.76 K

Cinque Terre

4