ಕಾಬೂಲ್ : ಆತ್ಮಾಹುತಿ ಕಾರು ಬಾಂಬ್ ದಾಳಿಯಲ್ಲಿ ನಾಲ್ವರು ನಾಗರಿಕರೂ ಸೇರಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ
ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಮಿಲಿಟರಿ ಚೆಕ್ ಪಾಯಿಂಟ್ ಬಳಿ ನಡೆದಿದೆ.
ನಹ್ರಿ ಸಾರಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಭದ್ರತಾ ಪಡೆಯ ಮೂವರು ಸಿಬ್ಬಂದಿ ಹಾಗೂ ಮಗು ಗಾಯಗೊಂಡಿದ್ದಾರೆ ಎಂದು ಹೆಲ್ಮಂಡ್ ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಒಮರ್ ತಿಳಿಸಿದ್ದಾರೆ.
ಹೆಲ್ಮಂಡ್ ಪ್ರಾಂತ್ಯದ ಬಹುತೇಕ ಭಾಗ ತಾಲಿಬಾನ್ ಉಗ್ರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ಅಫ್ಗನ್ ಸರ್ಕಾರದ ಸಂಧಾನಕಾರರು ಮತ್ತು ತಾಲಿಬಾನ್ ಸಂಘಟನೆ ನಾಯಕರ ನಡುವೆ ಕತಾರ್ ನಲ್ಲಿ ಐತಿಹಾಸಿಕ ಮಾತುಕತೆ ನಡೆದಿರುವಾಗಲೇ ಈ ದಾಳಿ ನಡೆದಿದೆ.
PublicNext
01/10/2020 12:36 pm